ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ 2021 ರ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಥಿಯೇಟರ್ ನಲ್ಲಿ ಮ್ಯಾಜಿಕ್ ಮಾಡಿರುವ ಚಿತ್ರ ಜನವರಿ 7 ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗಲಿದೆ. ವರದಿಯ ಪ್ರಕಾರ, ಚಿತ್ರದ ಸ್ಟ್ರೀಮಿಂಗ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ.
ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಿದ್ದ ಪುಷ್ಪಾ ಹಿಂದಿ ಭಾಷಿಕರ ನಾಡಲ್ಲಿ ಕಮಾಲ್ ಮಾಡಿದೆ. ಈ ಚಿತ್ರವು ಗಲ್ಲಾಪೆಟ್ಟಿಗೆಯ ದಾಖಲೆಗಳನ್ನು ಛಿದ್ರಗೊಳಿಸಿದೆ. ಮೊದಲಿಂದಲೂ ಬಾಲಿವುಡ್ ನಲ್ಲಿ ಅಲ್ಲು ಅರ್ಜುನ್ ಗೆ ಆಫರ್ಸ್ ಇತ್ತಾದರು, ಪುಷ್ಪ ಮಾಡಿರುವ ಕಮಾಲ್ ನಿಂದ ಬಿ-ಟೌನ್ ನಿರ್ಮಾಪಕರು ಸ್ಟೈಲಿಷ್ ಸ್ಟಾರ್ ನೊಂದಿಗೆ ಕೆಲಸ ಮಾಡಲು ಹೆಚ್ಚು ಕಾತರರಾಗಿದ್ದಾರೆ.
ಜನವರಿ 7 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಪುಷ್ಪಾ ಲಭ್ಯವಿರುತ್ತದೆ. ಈ ಬಗ್ಗೆ ಅಮೆಜ಼ಾನ್ ಪ್ರೈಮ್ ನಿನ್ನೆ ಅಂದರೆ ಜನವರಿ 5ನೇ ತಾರೀಖಿನಂದು ಅಧಿಕೃತವಾಗಿ ಘೋಷಿಸಿದೆ. ಇನ್ ಸೈಡ್ ಮೂಲಗಳ ಪ್ರಕಾರ, ಪುಷ್ಪಾ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸುಮಾರು 27-30 ಕೋಟಿ ರೂಪಾಯಿಗೆ ಖರೀದಿಸಿದೆ ಎಂಬ ಸುದ್ದಿ ವರದಿಯಾಗಿದೆ.
ಒಂದು ಚಿತ್ರದ ಸ್ಯಾಟಲೈಟ್ ರೈಟ್ಸ್ ಮೌಲ್ಯವು OTT ಒಪ್ಪಂದಕ್ಕಿಂತ ಹೆಚ್ಚಾಗಿರುತ್ತದೆ. ಅಂದರೆ ಪುಷ್ಪಾ ಚಿತ್ರದ ಸ್ಯಾಟಲೈಟ್ ರೈಟ್ಸ್ ಮೌಲ್ಯ 40ಕೋಟಿ ದಾಟಬಹುದು ಎಂಬುವುದು ಸಿನಿಪಂಡಿತರ ಲೆಕ್ಕಾಚಾರ. ಪುಷ್ಪಾ ಚಿತ್ರದ ಯಶಸ್ಸಿನೊಂದಿಗೆ ದಕ್ಷಿಣದ ಚಲನಚಿತ್ರಗಳು ಈಗ ತಮ್ಮ ಸ್ಟ್ರೀಮಿಂಗ್ ಹಕ್ಕುಗಳಿಗೆ ಮತ್ತಷ್ಟು ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ ಎಂಬ ಲೆಕ್ಕಾಚಾರವು ಇಂಡಸ್ಟ್ರಿಯಲ್ಲಿ ಶುರುವಾಗಿದೆ.