
ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಳ್ಳಲು ನೇಪಾಳದಲ್ಲಿದ್ದ ರಾಹುಲ್ ಗಾಂಧಿ, ಕಠ್ಮಂಡುವಿನ ನೈಟ್‌ಕ್ಲಬ್‌ನಲ್ಲಿ ಸ್ವಲ್ಪ ಸಮಯ ಕಳೆಯುತ್ತಿದ್ದರು.
ಮಾವನ ಎದುರೇ ಸ್ಪರ್ಧೆ ಮಾಡಿದ ಸೊಸೆ; 11 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ನಾಯಕ ಕಣದಿಂದ ಹಿಂದಕ್ಕೆ
ರಾಹುಲ್ ಗಾಂಧಿ ಕ್ಲಬ್‌ನಲ್ಲಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಲವಾರು ವಿಷಯಗಳ ಬಗ್ಗೆ ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದ್ದು ಟೀಕೆಗಳನ್ನು ಸಹ ಮಾಡಿದ್ದಾರೆ.
ಪಕ್ಷಕ್ಕೆ ಹಾಗೂ ಕಾಂಗ್ರೆಸ್ ಆಳ್ವಿಕೆ ಇರುವ ರಾಜ್ಯಗಳಲ್ಲಿ ವಿವಿಧ ಪ್ರಮುಖ ವಿಷಯಗಳ ಮೇಲೆ ಕೆಲಸ ಮಾಡಬೇಕಾದ ಸಮಯದಲ್ಲಿ ಪಾರ್ಟಿ ಮಾಡುತ್ತಿದ್ದಾರೆ ಎಂಬ ಟೀಕೆಗಳು ಬಂದಿವೆ.
ಹಾಗೆಯೇ ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದು ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆಯ ವಿಚಾರ. ವಿಡಿಯೋದಲ್ಲಿ ರಾಹುಲ್ ಗಾಂಧಿ ಈ ಮಹಿಳೆಯೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ನೆಟ್ಟಿಗರು ಈ ಮಹಿಳೆ ಯಾರೆಂಬುದರ ಬಗ್ಗೆ ಊಹಾಪೋಹಗಳನ್ನು ಶುರು ಮಾಡಿದರು, ಕೆಲವರು ಆಕೆಯನ್ನು ಚೀನಾದ ರಾಜತಾಂತ್ರಿಕರು ಎಂದು ಹೇಳಿದ್ದಾರೆ.
2018ರಿಂದ ಕಠ್ಮಂಡುವಿನಲ್ಲಿ ಸೇವೆ ಸಲ್ಲಿಸುತ್ತಿರುವ ನೇಪಾಳದ ಚೀನಾದ ರಾಯಭಾರಿ ಹೌ ಯಾಂಕಿ ಅವರೊಂದಿಗೆ ಹಲವರು ನಿಗೂಢ ಮಹಿಳೆಯ ಹೋಲಿಕೆ ಮಾಡಿದ್ದಾರೆ. ಈ ರೀತಿ ಮೊದಲು ಅಭಿಪ್ರಾಯ ವ್ಯಕ್ತ ಮಾಡಿದವರು ವೈಆರ್‌ಎಸ್ ಕಾಂಗ್ರೆಸ್ ರಾಜ್ಯಸಭಾ ಸಂಸದ ವಿಜಯಸಾಯಿ ರೆಡ್ಡಿ.
ಚೀನಾದ ಹನಿ ಟ್ರ್ಯಾಪ್‌ಗಳು ಹೆಚ್ಚುತ್ತಿರುವಂತೆಯೇ ರಾಹುಲ್ ಗಾಂಧಿ ಚೀನಾದ ರಾಜತಾಂತ್ರಿಕರೊಂದಿಗೆ ನೇಪಾಳದ ನೈಟ್ ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿರುವ ವಿಡಿಯೊ ಆತಂಕಕಾರಿಯಾಗಿದೆ ಎಂದಿದ್ದರು.
ಈ ನಡುವೆ ರಾಹುಲ್ ಗಾಂಧಿ ಮದುವೆ ಪಾರ್ಟಿಯಲ್ಲಿದ್ದಾರೆ ಎಂದು ಸುರ್ಜೆವಾಲಾ ಖಚಿತಪಡಿಸಿದ್ದಾರೆ. ಬಹು ಜನರ ಒತ್ತಾಯದ ಮೇರೆಗೆ ಆ ಮಹಿಳೆ ಯಾರೆಂಬುದನ್ನು ರಾಹುಲ್ ಗಾಂಧಿಯೇ ಬಹಿರಂಗಪಡಿಸಬೇಕು.