ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ದೇಶದ ಮೊದಲ ಮಹಿಳಾ ಕಿಲ್ಲರ್ ಸೈನೈಡ್ ಮಲ್ಲಿಕಾ ಬಗ್ಗೆ ನಿಮಗೆಷ್ಟು ಗೊತ್ತು? ಕೆಂಪಮ್ಮ ಸೈನೈಡ್ ಮಲ್ಲಿಕಾ ಆಗಿದ್ದೇಗೆ ಗೊತ್ತಾ? ಇಲ್ಲಿದೆ ವಿವರ. ಸೈನೈಡ್ ಮಲ್ಲಿಕಾ ಅಥವಾ ಕೆ.ಡಿ.ಕೆಂಪಮ್ಮ ಭಾರತದಲ್ಲಿ ಶಿಕ್ಷೆಗೊಳಗಾದ ಮೊದಲ ಮಹಿಳಾ ಸರಣಿ ಕೊಲೆಗಾರ್ತಿ ಎಂದು ಹೇಳಲಾಗಿದೆ.
ಕೆಂಪಮ್ಮ ಬೆಂಗಳೂರು ಹೊರವಲಯದ ಕಗ್ಗಲಿಪುರ ಗ್ರಾಮದ ನಿವಾಸಿ. ಟೈಲರ್ ಓರ್ವರನ್ನು ವಿವಾಹವಾಗಿದ್ದಆಕೆ ತನ್ನದೇ ಆದ ಚಿಟ್-ಫೈನಾನ್ಸ್ ವ್ಯವಹಾರವನ್ನು ನಡೆಸುತ್ತಿದ್ದಳು. ಕೆಂಪಮ್ಮನ ವ್ಯವಹಾರವು ನಷ್ಟವನ್ನು ಅನುಭವಿಸಿದಾಗ ಅವರ ವೈಯಕ್ತಿಕ ಜೀವನಕ್ಕೆ ಹೊಡೆತ ಬಿದ್ದಿತು. ಪರಿಸ್ಥಿತಿ ಹದಗೆಟ್ಟಾಗ ಆಕೆಯ ಪತಿ ಕೂಡ ಅವಳನ್ನು ತೊರೆದರು. ನಂತರ ಅವಳನ್ನು ಕುಟುಂಬದಿಂದ ಹೊರಹಾಕಲಾಯಿತು. ಇದೆಲ್ಲವೂ 1998 ರಮೊದಲು ಸಂಭವಿಸಿತು.
ಈ ಸಮಯದಲ್ಲಿ ಅವಳು ಸೇವಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದಳು ಮತ್ತು ನಂತರ ಸಣ್ಣ ಕಳ್ಳತನಗಳಲ್ಲಿಯೂ ತೊಡಗಿಕೊಂಡಿದ್ದಳು. ಆದರೆ ನಂತರ ಮಲ್ಲಿಕಾ ಇನ್ನೂ ಭಯಾನಕ ಕೃತ್ಯಗಳನ್ನು ನಡೆಸಿದ್ದಳು. ದೇವಾಲಯಗಳಿಗೆ ಭೇಟಿ ನೀಡುವ ಮಹಿಳೆಯರನ್ನು ಕೊಲೆ ಮಾಡಲು ಪ್ರಾರಂಭಿಸಿದಳು.
ಮಲ್ಲಿಕಾ ತೊಂದರೆಗೊಳಗಾದ ಮಹಿಳೆಯರನ್ನು ಮಾತ್ರ ಗುರಿಯಾಗಿಸಿಕೊಳ್ಳುತ್ತಿದ್ದಳು. ವರದಿಗಳಲ್ಲಿ ಹೇಳಿರುವಂತೆ, ಪೂಜೆ ಅಥವಾ ಪವಿತ್ರ ಆಚರಣೆಯೊಂದಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯೊಂದಿಗೆ ಅವಳು ಮಹಿಳೆಯರೊಂದಿಗೆ ಸ್ನೇಹ ಬೆಳೆಸುತ್ತಿದ್ದಳು. ಪೂಜೆ ಆಚರಣೆಯ ಕೊನೆಯಲ್ಲಿ, ಅವಳು ಮಹಿಳೆಯರಿಗೆ ಸೈನೈಡ್-ಲೇಪಿತ ನೀರನ್ನು ಕೊಡುತ್ತಿದ್ದಳು. ನಂತರ ಮಹಿಳೆಯ ಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದಳು. ವರದಿಯ ಪ್ರಕಾರ, ಅವಳು ಮೊದಲಿಗೆ 1999 ರಲ್ಲಿ ಮಮತಾ ರಾಜನ್ (30) ಎಂಬವರನ್ನು ಕೊಂದಳು.
2000ನೇ ಇಸವಿಯಲ್ಲಿ ಮನೆಯೊಂದರಲ್ಲಿ ಬೆಲೆಬಾಳುವ ವಸ್ತುಗಳನ್ನು ಕದಿಯಲು ಯತ್ನಿಸುತ್ತಿದ್ದಾಗ ಕೆಂಪಮ್ಮಳನ್ನು ಬಂಧಿಸಲಾಗಿತ್ತು. ಈ ಅಪರಾಧಕ್ಕಾಗಿ ಅವಳು ಕೇವಲ 6 ತಿಂಗಳು ಮಾತ್ರ ಶಿಕ್ಷೆ ಅನುಭವಿಸಿದ್ದಳು. ಜೈಲಿನಿಂದ ಹೊರಬಂದ ನಂತರ ಸರಣಿ ಕೊಲೆಗೆ ಕೈಹಾಕಿದಳು. ವರದಿಗಳ ಪ್ರಕಾರ 2007 ರಲ್ಲಿ ಐವರು ಮಹಿಳೆಯರನ್ನು ಕೊಂದಿದ್ದಳು.
ಆದರೆ ಈ ಭೀಕರ ಕೊಲೆಗಾರ್ತಿ ಅಂತಿಮವಾಗಿ 2008 ರಲ್ಲಿ ಆಭರಣಗಳನ್ನು ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಯಿತು. ತನ್ನ ಅಪರಾಧಗಳನ್ನು ಒಪ್ಪಿಕೊಂಡ ಆಕೆ ದರೋಡೆಯೇ ಮುಖ್ಯ ಉದ್ದೇಶ ಎಂದು ಪೊಲೀಸರಿಗೆ ತಿಳಿಸಿದ್ದಳು. ಇಬ್ಬರು ಮಹಿಳೆಯರ ಹತ್ಯೆಗೆ ಕೆಂಪಮ್ಮ ಎರಡು ಮರಣದಂಡನೆಯನ್ನು ಅನುಭವಿಸಬೇಕಾಯಿತು. ಆ ಪ್ರಕರಣದಲ್ಲಿ ಆಕೆಯ ವಿರುದ್ಧ ಕೇವಲ ಸಾಂದರ್ಭಿಕ ಸಾಕ್ಷ್ಯವಿದ್ದ ಕಾರಣ ಆಕೆಯ ಎರಡನೇ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು.