ಕೊರೊನಾ ವೈರಸ್, ಕೊರೊನಾ ಲಸಿಕೆ ಅಭಿಯಾನದ ಮಧ್ಯೆ ಕೊರೊನಾ ಲಸಿಕೆ ಮಿಕ್ಸಿಂಗ್ ಮತ್ತು ಮ್ಯಾಚಿಂಗ್ ಬಗ್ಗೆ ಚರ್ಚೆಯಾಗ್ತಿದೆ. ವಿವಿಧ ಕಂಪನಿಗಳ ಲಸಿಕೆಗಳನ್ನು ಜನರು ಮಿಕ್ಸ್ ಮಾಡಿ ತೆಗೆದುಕೊಳ್ತಿದ್ದಾರೆ. ಮೊದಲು ಒಂದು ಕಂಪನಿ ಲಸಿಕೆ ತೆಗೆದುಕೊಂಡ್ರೆ ಎರಡನೇ ಡೋಸ್ ಸಂದರ್ಭದಲ್ಲಿ ಬೇರೆ ಕಂಪನಿ ಲಸಿಕೆ ತೆಗೆದುಕೊಳ್ತಿದ್ದಾರೆ. ಇದು ಅಪಾಯಕಾರಿ ಕೆಲಸವೆಂದು ಡಬ್ಲ್ಯುಎಚ್ ಒ ಎಚ್ಚರಿಕೆ ನೀಡಿದೆ.
ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಪ್ರಕಾರ, ಲಸಿಕೆ ಮಿಕ್ಸಿಂಗ್ ನಿಂದ ಏನು ಪರಿಣಾಮವಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದ್ದರಿಂದ ಎಲ್ಲರೂ ಜಾಗರೂಕರಾಗಿರಬೇಕೆಂದು ಅವರು ಹೇಳಿದ್ದಾರೆ. ಅನೇಕ ಜನರು ಮಿಕ್ಸಿಂಗ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಬೇರೆ ಬೇರೆ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಬಹುದು. ಆದ್ರೆ ಇದ್ರ ಬಗ್ಗೆ ಯಾವುದೇ ಡೇಟಾ ಲಭ್ಯವಿಲ್ಲದ ಕಾರಣ ಒಂದೇ ಕಂಪನಿ ಲಸಿಕೆ ತೆಗೆದುಕೊಳ್ಳುವುದು ಒಳ್ಳೆಯದೆಂದು ಅವರು ಹೇಳಿದ್ದಾರೆ.
ಲಸಿಕೆ ಮಿಶ್ರಣದ ಬಗ್ಗೆ ಸಂಶೋಧನೆ ನಡೆಯುತ್ತದೆ. ಇದ್ರ ಬಗ್ಗೆ ಸಂಪೂರ್ಣ ಡೇಟಾ ಸಿಗುವವರೆಗೂ ಕಾಯುವುದು ಅವಶ್ಯಕವೆಂದು ಸೌಮ್ಯಾ ಹೇಳಿದ್ದಾರೆ.