alex Certify ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜನರಿಗೆ ಅಗತ್ಯ ಸಲಹೆಗಳನ್ನು ನೀಡಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಎಷ್ಟು ವಯಸ್ಸಿನಲ್ಲಿ ಜನರು ಎಷ್ಟು ವ್ಯಾಯಾಮ ಮಾಡಬೇಕೆಂದು ಸಲಹೆ ನೀಡಿದೆ.

ಮಕ್ಕಳಿಗೆ 5-17 ವರ್ಷವಾಗಿದ್ದರೆ ಪ್ರತಿದಿನ ಸುಮಾರು 60 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು ಎಂದು ಡಬ್ಲ್ಯುಎಚ್ ಒ ಹೇಳಿದೆ. ಪೋಷಕರು ಸಣ್ಣ ಮಕ್ಕಳಿಗೆ ಲಘು ವ್ಯಾಯಾಮ ನೀಡಬೇಕು. ಹದಿಹರೆಯದವರು ಸದೃಢವಾಗಿರಲು ಓಟವನ್ನು ಆಯ್ದುಕೊಳ್ಳಬಹುದೆಂದು ಡಬ್ಲ್ಯುಎಚ್ಒ ಹೇಳಿದೆ.

18-64 ವರ್ಷದ ಜನರು ವಾರಕ್ಕೆ ಸುಮಾರು 150-300 ನಿಮಿಷಗಳ ಮಧ್ಯಮ ತಾಲೀಮು ಮಾಡಬೇಕು. ಬೆಳೆಯುತ್ತಿರುವ ವಯಸ್ಸಿನಲ್ಲಿ ಸದೃಢವಾಗಿರಲು ಇದು ಸಹಾಯ ಮಾಡುತ್ತದೆ. ವಯಸ್ಸಾದಂತೆ ಆಯಾಸ, ನಿದ್ರಾಹೀನತೆ ಸೇರಿದಂತೆ ಅನೇಕ  ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಪ್ರತಿದಿನ ಸರಾಸರಿ 30-40 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಪ್ರಯೋಜನಕಾರಿ.

ವಯಸ್ಸು 65 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ವಾರಕ್ಕೆ 150 ನಿಮಿಷಗಳ ವ್ಯಾಯಾಮ ಸಾಕೆಂದು ಡಬ್ಲ್ಯುಎಚ್ಒ ಹೇಳಿದೆ. ದೇಹವು ಮೊದಲಿನಂತೆಯೇ ಚುರುಕುತನವನ್ನು ಹೊಂದಿರುವುದಿಲ್ಲ. ಕಷ್ಟದ ವ್ಯಾಯಾಮದಿಂದ ದೂರವಿರುವುದು ಒಳ್ಳೆಯದು ಎಂದು ಡಬ್ಲ್ಯುಎಚ್ಒ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...