ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಕೋವಿಡ್ -19 ಲಸಿಕೆಯನ್ನು ಪೂರೈಕೆಯನ್ನು WHO ಸ್ಥಗಿತಗೊಳಿಸಿದೆ. ಸೌಲಭ್ಯಗಳನ್ನು ನವೀಕರಿಸಲು ಮತ್ತು ತಪಾಸಣೆಯಲ್ಲಿ ಕಂಡುಬರುವ ನ್ಯೂನತೆಗಳನ್ನು ಪರಿಹರಿಸಲು ತಯಾರಕರಿಗೆ ಅನುವು ಮಾಡಿಕೊಡಲು ಈ ಕ್ರಮ ಕೈಗೊಂಡಿದೆ.
ಭಾರತದ ಭಾರತ್ ಬಯೋಟೆಕ್ ತಯಾರಿಸಿದ ಕೋವಿಡ್ -19 ಲಸಿಕೆ ವಿಶ್ವಸಂಸ್ಥೆಯ ಏಜೆನ್ಸಿಗಳ ಮೂಲಕ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ತಿಳಿಸಿದೆ. WHO ಹೇಳಿಕೆಯ ಪ್ರಕಾರ, ಲಸಿಕೆಯನ್ನು ಪಡೆದ ದೇಶಗಳಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿದೆ, ಆದರೆ ಸೂಕ್ತವಾದ ಕ್ರಮಗಳು ಏನೆಂದು ಸ್ಪಷ್ಟಪಡಿಸಿಲ್ಲ.
ಲಸಿಕೆ ಪರಿಣಾಮಕಾರಿಯಾಗಿದೆ. ಯಾವುದೇ ಸುರಕ್ಷತಾ ಕಾಳಜಿ ಹೊಂದಿಲ್ಲ. ಆದರೆ. ರಫ್ತುಗಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸುವುದರಿಂದ ಕೋವಾಕ್ಸಿನ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಮಾರ್ಚ್ 14 ರಿಂದ 22 ರವರೆಗೆ ನಡೆಸಲಾದ ತುರ್ತು ಬಳಕೆಯ ಪಟ್ಟಿಯ ತಪಾಸಣೆಯ ಫಲಿತಾಂಶಗಳಿಗೆ ಪ್ರತಿಕ್ರಿಯೆಯಾಗಿ ಅಮಾನತುಗೊಳಿಸಲಾಗಿದೆ ಎಂದು WHO ಹೇಳಿದೆ.