ಆರೋಗ್ಯವಂತ ಮಕ್ಕಳು ಮತ್ತು ಹದಿಹರೆಯದವರಿಗೆ ಬೂಸ್ಟರ್ ಡೋಸ್ ನ ಅಗತ್ಯವಿದೆ ಎಂಬುದಕ್ಕೆ ಪ್ರಸ್ತುತ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ. ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ರೂಪಾಂತರದ ವಿರುದ್ಧ ಈ ಹಿಂದೆ ಪಡೆದ ಲಸಿಕೆ ಪ್ರತಿರಕ್ಷೆ ನೀಡುವಲ್ಲಿ ಸ್ವಲ್ಪ ಕ್ಷೀಣಿಸುತ್ತಿರುವಂತೆ ತೋರುತ್ತಿದೆ. ಆದರೂ, ಯಾವ ವಯಸ್ಸಿನವರಿಗೆ ಬೂಸ್ಟರ್ ಡೋಸ್ ನ ಅಗತ್ಯವಿದೆ ಎಂಬುದನ್ನು ಕಂಡುಹಿಡಿಯಲು ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಗ್ಯವಂತ ಮಕ್ಕಳಿಗೆ ಅಥವಾ ಹದಿಹರೆಯದವರಿಗೆ ಬೂಸ್ಟರ್ ಗಳ ಅಗತ್ಯವಿದೆ ಎಂಬುದಕ್ಕೆ ಇದೀಗ ಯಾವುದೇ ಪುರಾವೆಗಳಿಲ್ಲ. ನಿಜಕ್ಕೂ ಯಾವುದೇ ಪುರಾವೆಗಳಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಕೊರೊನಾ ಮನುಷ್ಯನಿಂದ ಮನುಷ್ಯನಿಗೆ ಹರಡಲ್ಲಾ ಎಂದು WHO ಟ್ವೀಟ್ ಮಾಡಿ 2 ವರ್ಷ…! ನೆನಪಿಸಿಕೊಂಡು ಹಿಗ್ಗಾಮುಗ್ಗಾ ಟೀಕಿಸಿದ ನೆಟ್ಟಿಗರು
ಇಸ್ರೇಲ್ 12 ವರ್ಷ ವಯಸ್ಸಿನ ಮಕ್ಕಳಿಗೆ ಬೂಸ್ಟರ್ ಗಳನ್ನು ನೀಡಲು ಪ್ರಾರಂಭಿಸಿದೆ. ಇತ್ತ ಅಮೇರಿಕಾದ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಈ ತಿಂಗಳ ಆರಂಭದಲ್ಲಿ 12 ರಿಂದ 15 ವರ್ಷದ ಮಕ್ಕಳಿಗೆ ಫೈಜರ್ ಮತ್ತು ಬಯೋಎನ್‌ಟೆಕ್ ಲಸಿಕೆಯ ಮೂರನೇ ಡೋಸ್ ಬಳಕೆಯನ್ನು ಅಧಿಕೃತಗೊಳಿಸಿದೆ. ಕಳೆದ ವಾರ ಜರ್ಮನಿಯು 12 ರಿಂದ 17 ವರ್ಷದೊಳಗಿನ ಎಲ್ಲಾ ಮಕ್ಕಳು ಬೂಸ್ಟರ್ ಶಾಟ್ ಅನ್ನು ಪಡೆಯಿರಿ ಎಂದು ಶಿಫಾರಸು ಮಾಡಿದೆ. ಹಂಗೇರಿ ಕೂಡ ಇದೆ ಸಾಲಿನಲ್ಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌಮ್ಯಾ ಸ್ವಾಮಿನಾಥನ್, ದೇಶಗಳು ತಮ್ಮ ಜನಸಂಖ್ಯೆಗೆ ಬೂಸ್ಟರ್ ನೀಡುವುದನ್ನು ಹೇಗೆ ಪರಿಗಣಿಸಬೇಕು ಎಂಬ ನಿರ್ದಿಷ್ಟ ಪ್ರಶ್ನೆಯ ಬಗ್ಗೆ ಚರ್ಚಿಸಲು ಸಂಸ್ಥೆಯ ಉನ್ನತ ತಜ್ಞರ ಗುಂಪು ಈ ವಾರದ ನಂತರ ಭೇಟಿಯಾಗಲಿದೆ ಎಂದಿದ್ದಾರೆ.
ಜೊತೆಗೆ ಈ ಸಂದರ್ಭದಲ್ಲಿ,ಅತ್ಯಂತ ದುರ್ಬಲರನ್ನು, ತೀವ್ರತರವಾದ ಕಾಯಿಲೆ ಮತ್ತು ಸಾಯುವ ಅಪಾಯದಲ್ಲಿರುವವರನ್ನು ರಕ್ಷಿಸುವುದು ನಮ್ಮ ಗುರಿ ಎಂದಿದ್ದಾರೆ.