
ಮಂಕಿ ಪಾಕ್ಸ್ ಸೋಂಕಿಗೆ ಎಂಪಾಕ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿ ಪಾಕ್ಸ್ ಹೆಸರನ್ನು ಬದಲಾವಣೆ ಮಾಡಿದೆ. ಮಂಕಿ ಪಾಕ್ಸ್ ಬದಲಿಗೆ ಎಂಪಾಕ್ಸ್ ಎಂಬ ಪದ ಬಳಕೆಗೆ ಸೂಚನೆ ನೀಡಲಾಗಿದೆ.
ಜನಾಂಗೀಯ ಕಳಂಕವನ್ನು ಉಲ್ಲೇಖಿಸುತ್ತದೆ ಎಂಬ ಕಾರಣಕ್ಕೆ WHO ಮಂಕಿಪಾಕ್ಸ್ ಅನ್ನು mpox ಎಂದು ಮರುನಾಮಕರಣ ಮಾಡಿದೆ.
ಮಂಕಿಪಾಕ್ಸ್ ಕಾಯಿಲೆಯು ಈಗ ಹೊಸ ಹೆಸರನ್ನು ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸೋಮವಾರ ಬಹುನಿರೀಕ್ಷಿತ ಬದಲಾವಣೆಯನ್ನು ಘೋಷಿಸಿದೆ, ರೋಗದ ಮೂಲ ಹೆಸರು ಜನಾಂಗೀಯ ಮತ್ತು ಕಳಂಕಿತ ಭಾಷೆಯಾಗುತ್ತದೆ ಎನ್ನುವ ಕಾರಣಕ್ಕೆ ಬದಲಾವಣೆ ಮಾಡಲಾಗಿದೆ.