ಪದೇ ಪದೇ ಮುಖ ತೊಳೆಯುವುದು ಒಳ್ಳೆಯದು ಎಂಬುದೇನೋ ನಿಜ. ಆದರೆ ನಿಮ್ಮ ತ್ವಚೆಯ ಪ್ರಕಾರಕ್ಕೆ ಅನುಗುಣವಾಗಿ ಇದರ ಪರಿಣಾಮಗಳು ಪ್ರಭಾವ ಬೀರುತ್ತವೆ. ಹಾಗಿದ್ದರೆ ಯಾರು ಪದೇ ಪದೇ ಮುಖ ತೊಳೆಯುತ್ತಿರಬೇಕು?
ಒಣ ಚರ್ಮ ವಿಶೇಷ ಆರೈಕೆಯನ್ನು ಬೇಡುತ್ತದೆ. ಸರಿಯಾದ ಕ್ರೀಮ್ ಬಳಸದಿದ್ದರೆ ಮುಖದಿಂದ ಬಿಳಿ ಬಣ್ಣದ ಪದರ ಬೇರ್ಪಡುತ್ತದೆ. ಮುಖದ ಡ್ರೈನೆಸ್ ಅನ್ನು ಹೆಚ್ಚಿಸುತ್ತದೆ. ಪ್ರಯಾಣ ಮಾಡುವಾಗ ಕ್ರೀಮ್ ಬಳಸುವುದು ಒಳ್ಳೆಯದು. ಬಳಿಕ ತಣ್ಣಗಿನ ನೀರಿನಿಂದ ಮುಖ ತೊಳೆದು ಸ್ವಚ್ಛವಾದ ಬಟ್ಟೆಯಿಂದ ಮೃದುವಾಗಿ ಒತ್ತಿ ಒರೆಸಿದರೆ ಸಾಕು.
ಮಿಶ್ರ ತ್ವಚೆಯವರಾದರೆ ಮುಖವನ್ನು ತೊಳೆದ ಬಳಿಕ ವಾರಕ್ಕೆ ಎರಡು ಬಾರಿಯಾದರೂ ಸ್ಕ್ರಬ್ ಮಾಡಿಕೊಳ್ಳಿ. ಇದು ಮುಖದಲ್ಲಿ ಉಳಿದ ಜಿಡ್ಡನ್ನು ತೆಗೆದು ಹಾಕುತ್ತದೆ. ಮುಖದಲ್ಲಿ ಉಳಿದ ಎಣ್ಣೆಯಂಶ ದೂರಾಗುವಂತೆ ಮುಖ ತೊಳೆಯುವುದು ಬಹಳ ಮುಖ್ಯ.
ಸಂಪೂರ್ಣ ಎಣ್ಣೆ ತ್ವಚೆ ಹೊಂದಿರುವವರು ಫೋಮ್ ಆಧಾರಿತ ಉತ್ಪನ್ನಗಳನ್ನು ಬಳಸಬೇಕು. ಇದು ತ್ವಚೆಯ ಆಳದಿಂದ ಎಣ್ಣೆಯನ್ನು ತೆಗೆಯುತ್ತದೆ. ಮೊಡವೆಗಳಿದ್ದರೆ ಕ್ಲೆನ್ಸರ್ ಬಳಸಿ. ಇದರಿಂದ ಮುಖ ತೊಳೆದಾಗ ಜಿಡ್ಡು ಪೂರ್ತಿ ದೂರವಾಗಿ ಮುಖ ಹೊಳೆಯುತ್ತದೆ.