alex Certify ಹೊಸ ಕೋವಿಡ್​ ರೂಪಾಂತರಿಗೆ ‘ಒಮ್ರಿಕಾನ್​’ ಎಂದು ಹೆಸರಿಟ್ಟ ವಿಶ್ವ ಆರೋಗ್ಯ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಕೋವಿಡ್​ ರೂಪಾಂತರಿಗೆ ‘ಒಮ್ರಿಕಾನ್​’ ಎಂದು ಹೆಸರಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಆಫ್ರಿಕಾ, ಹಾಂಕಾಂಗ್​ ಸೇರಿದಂತೆ ಹಲವೆಡೆ ಕಾಣಿಸಿಕೊಳ್ಳುತ್ತಿರುವ ಕೋವಿಡ್​ 19ನ B.1.1529 ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆತಂಕ ವ್ಯಕ್ತಪಡಿಸಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್​, ಇಸ್ರೆಲ್​ ಹಾಗೂ ಬೋಟ್ಸ್ವಾನಾದಲ್ಲಿ ಪತ್ತೆಯಾದ ಈ ಕಳವಳಕಾರಿ ರೂಪಾಂತರಿಗೆ ಒಮ್ರಿಕಾನ್​ ಎಂದು ಹೆಸರಿಡಲಾಗಿದೆ.

ಶುಕ್ರವಾರದಂದು ಈ ವಿಚಾರವಾಗಿ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್​ 19 B.1.1529 ನ್ನು ಕಳವಳಕಾರಿ ಎಂದು ವ್ಯಾಖ್ಯಾನಿಸಿದೆ. ಈ ಹೊಸ ರೂಪಾಂತರಿಯು ಕೋವಿಡ್​ನ್ನು ಅತ್ಯಂತ ವೇಗವಾಗಿ ಹರಡುತ್ತದೆ. ಹೀಗಾಗಿ ಅನೇಕ ರಾಷ್ಟ್ರಗಳು ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಆಫ್ರಿಕಾ ಪ್ರಯಾಣಕ್ಕೆ ನಿರ್ಬಂಧ ಹೇರಲು ಮುಂದಾಗಿದೆ.

ಈ ನಡುವೆ ಅಮೆರಿಕದ ಎಪಿಡೆಮಿಯೋಲಾಜಿಸ್ಟ್​ ಮಾರಿಯಾ ವ್ಯಾನ್​ ಖೆರ್ಕೊವ್​ ಅವರು ಡೆಲ್ಟಾ ರೂಪಾಂತರಿಯ ಬಗ್ಗೆಯೂ ಆತಂಕ ಹೊರಹಾಕಿದ್ದಾರೆ. ಈಗ ಹೊಸ ರೂಪಾಂತರಿ ಓಮ್ರಿಕಾನ್​ ಸೃಷ್ಟಿಯಾಗಿದೆ ಎಂಬುದು ನಿಜ. ಹಾಗೆಂದ ಮಾತ್ರಕ್ಕೆ ಡೆಲ್ಟಾ ರೂಪಾಂತರಿಯನ್ನು ನಾವು ಮರೆಯುವಂತಿಲ್ಲ. ಕೊರೊನಾ ಲಸಿಕೆ ಅಭಿಯಾನ ಹಾಗೂ ಸೋಂಕು ಹರಡದಂತೆ ತಡೆಯುವ ಕಡೆಗೆ ನಾವು ಇನ್ನೂ ಹೆಚ್ಚಿನ ಬಲವನ್ನು ಹಾಕಬೇಕಿದೆ ಎಂದು ಹೇಳಿದ್ದಾರೆ.

ಯಾವ್ಯಾವ ದೇಶಗಳಲ್ಲಿ ಪ್ರಯಾಣ ನಿರ್ಬಂಧ..?

ಅಮೆರಿಕ : ಸೋಮವಾರದಿಂದ ದಕ್ಷಿಣ ಆಫ್ರಿಕಾ ಸೇರಿದಂತೆ 7 ಆಫ್ರಿಕಾದ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ಹೇರುವುದಾಗಿ ಶ್ವೇತಭವನ ಮಾಹಿತಿ ಹೊರಡಿಸಿದೆ. ಕೊರೊನಾ ನೆಗಟಿವ್​ ಪ್ರಮಾಣ ಪತ್ರವನ್ನು ಹೊಂದಿದ ಅಮೆರಿಕ ಪ್ರಜೆಗಳು ಹಾಗೂ ಅನೇಕ ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದವರನ್ನು ಹೊರತುಪಡಿಸಿ ಮಿಕ್ಕೆಲ್ಲ ಪ್ರಯಾಣಿಕರಿಗೆ ಈ ನಿರ್ಬಂಧ ಅನ್ವಯವಾಗಲಿದೆ.

ಕೆನಡಾ : ಕಳೆದ 14 ದಿನಗಳಲ್ಲಿ ದಕ್ಷಿಣ ಆಫ್ರಿಕಾ ಮಾರ್ಗವಾಗಿ ಪ್ರಯಾಣಿಸಿದ ಎಲ್ಲಾ ವಿದೇಶಿ ಪ್ರಜೆಗಳಿಗೆ ಕೆನಡಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಕೆನಡಾದ ಪ್ರಜೆಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ.

ಸೌದಿ ಅರೇಬಿಯಾ : ಸೌದಿ ಅರೇಬಿಯಾ ಕೂಡ ದಕ್ಷಿಣ ಆಫ್ರಿಕಾ, ನಮೀಬಿಯಾ, ಲೆಸೊಥೋ, ಇಸ್ವಾಟಿನಿ, ಜಿಂಬಾಬ್ವೆ, ಮೊಂಜಾಂಬಿಕ್​ ಹಾಗೂ ಬೋಟ್ಸ್ವಾನಾದಿಂದ ವಿಮಾನಯಾನವನ್ನು ನಿರ್ಬಂಧಿಸಿದೆ.

ಯುರೋಪ್​​ ಒಕ್ಕೂಟ : ಯುರೋಪ್​ ಕೂಡ ದಕ್ಷಿಣ ಆಫ್ರಿಕಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ವಿದೇಶದಿಂದ ಮರಳುವ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಹಾಗೂ ಕ್ವಾರಂಟೈನ್​ ಕಡ್ಡಾಯವಾಗಿದೆ.

ಬ್ರಿಟನ್​ : ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಲೆಸೆಥೋ, ಎಸ್ವತಿನಿ, ಜಿಂಬಾಬ್ವೆ ಮತ್ತು ನಮೀಬಿಯಾ ರಾಷ್ಟ್ರಗಳಿಗೆ ಪ್ರಯಾಣ ನಿರ್ಬಂಧ ಹೇರಿದೆ. ಈ ಆರು ರಾಷ್ಟ್ರಗಳನ್ನು ಬ್ರಿಟನ್​ ಪ್ರಯಾಣದ ‘ಕೆಂಪು ಪಟ್ಟಿ’ಗೆ ಸೇರಿಸಲಾಗಿದೆ.

ಇನ್ನುಳಿದಂತೆ ಆಸ್ಟ್ರೇಲಿಯಾ, ಬ್ರೆಜಿಲ್​ ಕೂಡ ಆಫ್ರಿಕನ್​ ದೇಶಗಳ ಪ್ರಯಾಣಕ್ಕೆ ಬ್ರೇಕ್​ ಹಾಕಿವೆ. ಈ ರೀತಿ ವಿದೇಶಗಳು ಪ್ರಯಾಣ ನಿರ್ಬಂಧ ಹೇರಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದಕ್ಷಿಣ ಆಫ್ರಿಕಾ ಇದು ಅನ್ಯಾಯ ಎಂದು ಹೇಳಿದೆ.

ಭಾರತದ ನಿಲುವೇನು..?

ಕೊರೊನಾ ವೈರಸ್​ ಪ್ರಕರಣಗಳು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಡಿಸೆಂಬರ್​ 15ರಿಂದ ಅಂತಾರಾಷ್ಟ್ರೀಯ ವಿಮಾನ ಯಾನ ಸೇವೆ ಆರಂಭಗೊಳ್ಳಲಿದೆ ಎಂದು ನಿನ್ನೆ ಕೇಂದ್ರ ವಿಮಾನಯಾನ ಸಚಿವಾಲಯ ಘೋಷಣೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...