alex Certify 100ಕ್ಕೂ ಅಧಿಕ ಮಂದಿ ಸಾವಿಗೆ ಕಾರಣವಾದ ಸತ್ಸಂಗ: ‘ದೇವ ಮಾನವ’ ಭೋಲೆ ಬಾಬಾ ಬಗ್ಗೆ ಒಂದಿಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100ಕ್ಕೂ ಅಧಿಕ ಮಂದಿ ಸಾವಿಗೆ ಕಾರಣವಾದ ಸತ್ಸಂಗ: ‘ದೇವ ಮಾನವ’ ಭೋಲೆ ಬಾಬಾ ಬಗ್ಗೆ ಒಂದಿಷ್ಟು ಮಾಹಿತಿ

ಲಖನೌ: ಮಂಗಳವಾರ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಧಾರ್ಮಿಕ ಬೋಧಕ ವಿಶ್ವ ಹರಿ ಭೋಲೆ ಬಾಬಾ ಅವರ ‘ಸತ್ಸಂಗ'(ಧಾರ್ಮಿಕ ಸಭೆ) ದುರಂತದಲ್ಲಿ ಕೊನೆಗೊಂಡಿದೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 100 ಕ್ಕೂ ಹೆಚ್ಚು ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಕಾರ್ಯಕ್ರಮ ವಿವಾದಕ್ಕೆ ಹೊಸದೇನಲ್ಲ.

ಸ್ಥಳೀಯರ ಪ್ರಕಾರ, ಸೂರಜ್ ಪಾಲ್ ಅವರನ್ನು ಅವರ ಅನುಯಾಯಿಗಳು ಭೋಲೆ ಬಾಬಾ ಕರೆಯುತ್ತಾರೆ, ಅವರು ಕಸ್ಗಂಜ್ ಜಿಲ್ಲೆಯ ಪಟಿಯಾಲಿ ಪ್ರದೇಶದ ಬಹದ್ದೂರ್ ನಗರದಿಂದ ಬಂದವರು. 17 ವರ್ಷಗಳ ಹಿಂದೆ ರಾಜ್ಯ ಪೊಲೀಸ್‌ ಹುದ್ದೆ ತೊರೆದು ಧರ್ಮ ಪ್ರಚಾರಕರಾದರು.

ಉತ್ತರ ಪ್ರದೇಶ ಮಾತ್ರವಲ್ಲದೇ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ಅವರ ಅನುಯಾಯಿಗಳು ಇದ್ದಾರೆ. ಅವರ ಸಹಚರರು ಮಾಧ್ಯಮದಿಂದ ಅಂತರ ಕಾಯ್ದುಕೊಳ್ಳುತ್ತಾರೆ.

ಭಕ್ತರೊಬ್ಬರ ಪ್ರಕಾರ, ಭೋಲೆ ಬಾಬಾ ಅವರಿಗೆ ಯಾವುದೇ ಧಾರ್ಮಿಕ ಮಾರ್ಗದರ್ಶಕರು ಇರಲಿಲ್ಲ. ಅವರು ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ, ಅವರು ದೇವತೆಯ ‘ದರ್ಶನ’ವನ್ನು ಹೊಂದಿದರು. ಅಂದಿನಿಂದ ಅವರು ಆಧ್ಯಾತ್ಮಿಕ ಅನ್ವೇಷಣೆಗೆ ಒಲವು ತೋರಿದರು. ಅವರು ಪ್ರತಿ ಮಂಗಳವಾರ ತಮ್ಮ ‘ಸತ್ಸಂಗ’ಗಳನ್ನು ನಡೆಸುತ್ತಿದ್ದರು ಹತ್ರಾಸ್ ಗೆ ಮೊದಲು, ಅವರು ಕಳೆದ ವಾರ ಮೈನ್‌ಪುರಿ ಜಿಲ್ಲೆಯಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ನಡೆಸಿದ್ದರು.

ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಅವರು ಮೇ 2022 ರಲ್ಲಿ ಫರೂಕಾಬಾದ್ ಜಿಲ್ಲೆಯಲ್ಲಿ ಕೇವಲ 50 ಜನರು ಭಾಗವಹಿಸಲು ಸತ್ಸಂಗಕ್ಕೆ ಅನುಮತಿ ಕೋರಿದ್ದರು. 50,000 ಕ್ಕಿಂತ ಹೆಚ್ಚು ಜನ ಬಂದಿದ್ದರಿಂದ ಸ್ಥಳೀಯ ಆಡಳಿತಕ್ಕೆ ದೊಡ್ಡ ತಲೆನೋವು ತಂದಿತ್ತು.

ಮಂಗಳವಾರ ನಡೆದ ಹತ್ರಾಸ್ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಯಿತು. ಗೊಂದಲ ಉಂಟಾಗಿ ಕಾಲ್ತುಳಿತಕ್ಕೆ ಕಾರಣವಾಯಿತು. ಕಾಲ್ತುಳಿತದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡರು. ಪುಲ್ರೈ ಗ್ರಾಮದಲ್ಲಿ ನಡೆದ ‘ಸತ್ಸಂಗ’ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...