alex Certify ಸೆಬಿ ಹೊಸ ಅಧ್ಯಕ್ಷರಾಗಿ ಮಾಧಬಿ ಪುರಿ ಬುಚ್ ಆಯ್ಕೆ; ಮೊದಲ ಮಹಿಳಾ ಅಧ್ಯಕ್ಷೆ ಬಗ್ಗೆ ಇಲ್ಲಿದೆ ಸಂಪೂರ್ಣ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಬಿ ಹೊಸ ಅಧ್ಯಕ್ಷರಾಗಿ ಮಾಧಬಿ ಪುರಿ ಬುಚ್ ಆಯ್ಕೆ; ಮೊದಲ ಮಹಿಳಾ ಅಧ್ಯಕ್ಷೆ ಬಗ್ಗೆ ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ಭಾರತದ ಮಾರುಕಟ್ಟೆ ನಿಯಂತ್ರಕ, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಅಥವಾ ಸೆಬಿಯ ಹೊಸ ಅಧ್ಯಕ್ಷರಾಗಿ ಮಾಧಬಿ ಪುರಿ ಬುಚ್ ಅವರನ್ನು ಸೋಮವಾರ ಸರ್ಕಾರ ನೇಮಿಸಿದೆ.

ಕ್ಯಾಬಿನೆಟ್ ನೇಮಕಾತಿ ಸಮಿತಿಯು ಬುಚ್ ಅವರ ನೇಮಕಾತಿಯನ್ನು ಮೂರು ವರ್ಷಗಳ ಆರಂಭಿಕ ಅವಧಿಗೆ ಅನುಮೋದಿಸಿದೆ. ಇದರರ್ಥ ಇನ್ಮುಂದೆ ಮಾದಭಿ ಅವರು ಅಜಯ್ ತ್ಯಾಗಿ ಅವರ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ. ಅಂದಹಾಗೇ ತ್ಯಾಗಿ ಅವರ ಐದು ವರ್ಷಗಳ ಅವಧಿ ಫೆಬ್ರವರಿ 28 ರಂದು ಕೊನೆಗೊಂಡಿದೆ.

ಈ ಮೂಲಕ ಮಾಧಬಿ ಪುರಿ ಬುಚ್ ಅವರು ಸೆಬಿಯ ಮೊದಲ ಮಹಿಳಾ ಮುಖ್ಯಸ್ಥರಾಗಿದ್ದಾರೆ. ಹಲವು ದಿಗ್ಗಜರು‌ ಮಹಿಳೆಯೊಬ್ಬರು ಬಂಡವಾಳ ಮಾರುಕಟ್ಟೆ ನಿಯಂತ್ರಕ ಮುಖ್ಯಸ್ಥರಾಗುತ್ತಿರುವುದು ಇದೇ ಮೊದಲು‌ ಎಂದು ಅಭಿನಂದಿಸಿದ್ದಾರೆ.

ಮತ್ತೆ ಬೆಲೆ ಏರಿಕೆ ಬಿಸಿ: ನಾಳೆಯಿಂದಲೇ ದುಬಾರಿ ದುನಿಯಾ; ಹಾಲಿನ ದರ ಹೆಚ್ಚಳ, ಅಮುಲ್ ಹಾಲು ಲೀಟರ್ ಗೆ 2 ರೂ. ಏರಿಕೆ

ಅಂದಹಾಗೇ ಮಾಧಬಿ‌ ಅವರು ಸೆಬಿಯ ಮಾಜಿ ಪೂರ್ಣ ಸಮಯದ ಸದಸ್ಯರಾಗಿದ್ದರು(WTM). ಅವರು ಏಪ್ರಿಲ್ 5, 2017 ಮತ್ತು ಅಕ್ಟೋಬರ್ 4, 2021 ರ ನಡುವೆ ಸೆಬಿಯ WTM ಆಗಿದ್ದರು.

ಮಾಧಬಿ ಅವರು ಹಣಕಾಸು ಮಾರುಕಟ್ಟೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಸೆಬಿಯಲ್ಲಿ, ಅವರು ಹೂಡಿಕೆ ನಿರ್ವಹಣೆ, ಸಾಮೂಹಿಕ ಹೂಡಿಕೆ ಯೋಜನೆಗಳು ಮತ್ತು ಕಣ್ಗಾವಲು ಸೇರಿದಂತೆ ವಿವಿಧ ಪೋರ್ಟ್‌ಫೋಲಿಯೊಗಳನ್ನು ನಿರ್ವಹಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...