alex Certify ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಐಎಎಸ್ ಅಧಿಕಾರಿ ಈ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಐಎಎಸ್ ಅಧಿಕಾರಿ ಈ ಕಾರ್ಯ

ನಮ್ಮಲ್ಲಿ ಐಎಎಸ್ ಅಧಿಕಾರಿಗಳಿರಲಿ, ಮೊದಲ ದರ್ಜೆಯ ಗುಮಾಸ್ತ ಯಾವುದಾದರೂ ಸಾರ್ವಜನಿಕ ಸಮಾರಂಭಗಳು ಅಥವಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಅವನಿಗೊಂದು ಎಸಿ ಇರುವ ವಾಹನ, ಹಿಂದೆ ಮುಂದೆ ಸುತ್ತುವ ಸಿಬ್ಬಂದಿ ಗಣ ಇರಬೇಕು. ಕೆಸರು ತಾಕುತ್ತದೆ ಎಂಬ ಕಾರಣಕ್ಕೆ ಬಹುತೇಕ ಸರ್ಕಾರಿ ಅಧಿಕಾರಿಗಳು/ಸಿಬ್ಬಂದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದೇ ಇಲ್ಲ. ಒಂದು ವೇಳೆ ಹೋದರೂ, ಕೆಸರು ಒಣಗಿದ ನಂತರ ಶಾಸ್ತ್ರಕ್ಕೆಂಬಂತೆ ಭೇಟಿ ನೀಡಿ ಬರುತ್ತಾರೆ.

ಆದರೆ, ಅಸ್ಸಾಂನ ಐಎಎಸ್ ಅಧಿಕಾರಿಯೊಬ್ಬರು ಬರಿಗಾಲಿನಲ್ಲಿ ಪ್ರವಾಹಪೀಡಿತ ಪ್ರದೇಶದಲ್ಲಿನ ಕೆಸರಿನಲ್ಲಿ ನಡೆದಾಡಿ ಪರಿಸ್ಥಿತಿಯ ಅವಲೋಕನ ನಡೆಸಿರುವುದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಅಕ್ಷಯ್​ಕುಮಾರ್​ ನಟನೆಯ `ಪೃಥ್ವಿರಾಜ್` ರಿಲೀಸ್​ಗೆ ದಿನಗಣನೆ: ಕೊನೆ ಕ್ಷಣದಲ್ಲಿ ಟೈಟಲ್ ಚೇಂಜ್..!

ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಮತಿ ಕೀರ್ತಿ ಜಲ್ಲಿ ಎಂಬ ಈ ಐಎಎಸ್ ಅಧಿಕಾರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಬೆರೆತು ಅವರ ಕಷ್ಟಗಳನ್ನು ಆಲಿಸಿದ್ದಾರೆ.

ಅವರು ಬರಿಗಾಲಿನಲ್ಲಿ ಭೇಟಿ ನೀಡಿದ ಫೋಟೋಗಳನ್ನು ಇನ್ನೋರ್ವ ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಆ ಹೆಣ್ಣು ಮಗಳು ಐಎಎಸ್ ಅಧಿಕಾರಿಯ ಕಾರ್ಯಕ್ಕೆ ಮುಕ್ತಕಂಠದ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.

ಹಲವಾರು ನೆಟ್ಟಿಗರು ಪ್ರವಾಹಪೀಡಿತರನ್ನು ಖುದ್ದಾಗಿ ಭೇಟಿ ಮಾಡಿ ಅವರ ಸಂಕಷ್ಟಗಳಿಗೆ ಧ್ವನಿಯಾಗಿರುವ ಕೀರ್ತಿ ಜಲ್ಲಿ ಅವರ ಸೇವಾ ಬದ್ಧತೆಗೆ ತಾರೀಫ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...