ಭಾರತದ ಪ್ರತಿಭಾವಂತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಹಿಮಾನಿ ಮೋರ್ ಎಂಬುವರನ್ನು ವಿವಾಹವಾಗಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತಸದ ಅಲೆಯನ್ನು ಸೃಷ್ಟಿಸಿದೆ.
ಹಿಮಾನಿ ಮೋರ್ ಯಾರು ?
ಹಿಮಾನಿ ಮೋರ್ ಹರಿಯಾಣದ ಲರ್ಸೌಲಿ ನಿವಾಸಿ. ಅವರು ಅಮೆರಿಕಾದ ಮ್ಯಾಕಾರ್ಮಿಕ್ ಇಸೆನ್ಬರ್ಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಕ್ರೀಡಾ ನಿರ್ವಹಣೆ ಮತ್ತು ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದಾರೆ.
ದೆಹಲಿಯ ಮಿರಾಂಡಾ ಹೌಸ್‌ನಲ್ಲಿ ರಾಜಕೀಯ ವಿಜ್ಞಾನ ಮತ್ತು ದೈಹಿಕ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ. ಹಿಮಾನಿ ಅವರು ಒಬ್ಬ ಪ್ರತಿಭಾವಂತ ಟೆನಿಸ್ ಆಟಗಾರ್ತಿಯೂ ಆಗಿದ್ದಾರೆ. 2017 ರ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು ಮತ್ತು 2016 ರಲ್ಲಿ ಮಲೇಷಿಯಾದಲ್ಲಿ ನಡೆದ ವಿಶ್ವ ಜೂನಿಯರ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಅಮೆರಿಕಾದ ಮ್ಯಾಸಚೂಸೆಟ್ಸ್‌ನ ಅಮೆರ್ಸ್ಟ್ ಕಾಲೇಜಿನಲ್ಲಿ ಮಹಿಳಾ ಟೆನಿಸ್ ತಂಡದ ಸಹಾಯಕ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನೀರಜ್ ಮತ್ತು ಹಿಮಾನಿ ಅವರ ವಿವಾಹವು ಭಾರತದಲ್ಲಿ ನಡೆದಿದೆ. ವಿವಾಹದ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ಗೌಪ್ಯವಾಗಿಡಲಾಗಿದೆ.
ನೀರಜ್ ಚೋಪ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿವಾಹದ ಸುದ್ದಿಯನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಭಿಮಾನಿಗಳು ದಂಪತಿಗೆ ಶುಭಾಶಯಗಳನ್ನು ಕೋರಿದ್ದಾರೆ.