
ಅಲ್ಲದೆ, ಬೃಹತ್ ಉದ್ಯಮಗಳನ್ನು ಯಶಸ್ಸಿನತ್ತ ಮುನ್ನಡೆಸುತ್ತಾರೆ. ಇದು ಅವರನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿದೆ. ಅಮೆರಿಕದಲ್ಲಿ ಹಲವಾರು ಭಾರತೀಯ ಮೂಲದವರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಅನಿರುದ್ಧ್ ದೇವಗನ್ ಕೂಡ ಶ್ರದ್ಧೆ ಮತ್ತು ಸಾಧನೆಯ ಮೂರ್ತರೂಪವಾಗಿದ್ದಾರೆ.
ಯಾರು ಈ ಅನಿರುದ್ಧ್ ದೇವಗನ್ ?
ಅನಿರುದ್ಧ್ ದೇವಗನ್ ಅವರು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)ಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ್ರು. ಇದಕ್ಕೂ ಮುನ್ನ ದೆಹಲಿ ಪಬ್ಲಿಕ್ ಸ್ಕೂಲ್ (DPS) ನಲ್ಲಿ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ್ರು. ಬಳಿಕ ಅಮೆರಿಕಗೆ ಹಾರಿದ ಅವರು ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿ ಪಡೆದರು.
ಸಣ್ಣದಿರುವಾಗದಿಂದಲೇ ಬುದ್ಧಿವಂತರಾಗಿದ್ದ ಅವರು, ನಾಯಕತ್ವದ ಗುಣವನ್ನು ಹೊಂದಿದ್ದರು. ಮೊದಲಿಗೆ ಐಬಿಎಂನಲ್ಲಿ ಉದ್ಯೋಗಿಯಾಗಿ ಶುರುವಾದ ಅವರ ಪ್ರಯಾಣವು ಇದೀಗ ಕ್ಯಾಡೆನ್ಸ್ ಸಿಸ್ಟಮ್ಸ್‌ನ ಸಿಇಒ ಆಗಿ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಅವರ ವಾರ್ಷಿಕ ಗಳಿಕೆಯು 32,216,034 ಡಾಲರ್ ಆಗಿದೆ. ಅಂದರೆ ಅವರು ದಿನಕ್ಕೆ 72.6 ಲಕ್ಷ ರೂ. ಸಂಪಾದಿಸುತ್ತಿದ್ದಾರೆ.
ಭಾರತೀಯ ಮೂಲದವರು ಉನ್ನತ ಸ್ಥಾನಗಳಿಸಿರುವ ಈ ಸಾಧನೆಯಲ್ಲಿ, ಅನಿರುದ್ಧ್ ಅವರು ಸತ್ಯ ನಾಡೆಲ್ಲಾ, ಸುಂದರ್ ಪಿಚೈ, ಜಯಶ್ರೀ ಉಳ್ಳಾಲ್ ಮತ್ತು ಅರವಿಂದ್ ಕೃಷ್ಣರಂತಹ ದಿಗ್ಗಜರನ್ನು ಒಳಗೊಂಡಿರುವ ಅಮೆರಿಕದ ಟೆಕ್ ದೈತ್ಯರ ಪ್ರಮುಖ ಭಾರತೀಯ ಸಿಇಒಗಳ ಲೀಗ್‌ಗೆ ಸೇರಿದ್ದಾರೆ.