
ಕಳೆದ ವಾರ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಶೇ.40ಕ್ಕಿಂತ ಹೆಚ್ಚಿದೆ. ಇದು ಅಮೆರಿಕದಾದ್ಯಂತ ಕೋವಿಡ್ ಸಾವು ವರದಿ ಮತ್ತು ಭಾರತದಲ್ಲಿ ಹೊಸದಾಗಿ ಸರಿ ಹೊಂದಿಸಲಾದ ಅಂಕಿಅಂಶಗಳ ಬದಲಾವಣೆಗಳಿಂದಲೂ ಆಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.
ಕೋವಿಡ್ ಕುರಿತಾದ ತನ್ನ ಇತ್ತೀಚಿನ ವರದಿಯಲ್ಲಿ, ಎಲ್ಲೆಡೆ ಹೊಸ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯು ಕುಸಿದಿದೆ ಎಂದು ಹೇಳಿದೆ.
ಕಳೆದ ವಾರದಲ್ಲಿ ವಿಶ್ವದಾದ್ಯಂತ ಸುಮಾರು 10 ಮಿಲಿಯನ್ ಹೊಸ ಕೋವಿಡ್ ಸೋಂಕು ಮತ್ತು 45,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿದೆ. ಡಬ್ಲ್ಯುಎಚ್ಒ ಪ್ರಕಾರ ಮಹಾರಾಷ್ಟ್ರದಲ್ಲಿ 4,000ಕ್ಕೂ ಹೆಚ್ಚು ಕೋವಿಡ್ ಸಾವಿನ ಸಂಖ್ಯೆಯನ್ನು ಆರಂಭದಲ್ಲಿ ಸೇರಿಸಲಾಗಿಲ್ಲವೆಂದು ಕಳೆದ ವಾರ ಸೇರಿಸಲಾಗಿದೆ.
ಹಳೆ ವಾಹನ ಮಾಲೀಕರಿಗೆ ಬೆಚ್ಚಿ ಬೀಳಿಸುವ ಸುದ್ದಿ: ಏ. 1 ರಿಂದ 15 ವರ್ಷದ ಹಳೆ ವಾಹನ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ
ಸಂಸ್ಥೆಯು ಇತ್ತೀಚಿನ ವಾರಗಳಲ್ಲಿ ವ್ಯಾಪಕ ಪರೀಕ್ಷೆ ಮತ್ತು ಇತರ ಕಣ್ಗಾವಲು ಕ್ರಮ ಕೈಬಿಡುವುದರ ವಿರುದ್ಧ ಎಚ್ಚರಿಸಿದೆ, ಹಾಗೆ ಮಾಡುವುದರಿಂದ ವೈರಸ್ ಹರಡುವಿಕೆಯನ್ನು ನಿಖರವಾಗಿ ಪತ್ತೆಹಚ್ಚುವ ಪ್ರಯತ್ನಗಳನ್ನು ದುರ್ಬಲಗೊಳಿಸಿದಂತಾಗುತ್ತದೆ ಎಂದು ಹೇಳಿದೆ.
ಈ ರೀತಿ ಮಾಡುವುದರಿಂದ ವೈರಸ್ ಯಾವ ಪ್ರದೇಶದಲ್ಲಿದೆ ಅದು ಹೇಗೆ ಹರಡುತ್ತಿದೆ ಮತ್ತು ಅದು ಹೇಗೆ ವಿಕಸನಗೊಳ್ಳುತ್ತಿದೆ ಎಂಬುದನ್ನು ಪತ್ತೆಹಚ್ಚಲು ನಮ್ಮ ಸಾಮೂಹಿಕ ಸಾಮರ್ಥ್ಯಕ್ಕೆ ತಡೆ ಹಾಕಿದಂತಾಗುತ್ತದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.
ಯುರೋಪ್, ಉತ್ತರ ಅಮೇರಿಕಾ ಮತ್ತು ಇತರೆಡೆ ಇತ್ತೀಚೆಗೆ ತಮ್ಮ ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳನ್ನು ತೆಗೆದುಹಾಕಿವೆ. ಹೆಚ್ಚಿನ ಮಟ್ಟದ ವ್ಯಾಕ್ಸಿನೇಷನ್ ಅನ್ನು ಮಾತ್ರ ಅವಲಂಬಿಸಿವೆ.
ಪ್ರಕರಣಗಳಲ್ಲಿ ಜಾಗತಿಕ ಕುಸಿತದ ಹೊರತಾಗಿಯೂ, ಓಮಿಕ್ರಾನ್ ಏಕಾಏಕಿ ಹರಡುವುದನ್ನು ತಡೆಯಲು ಚೀನಾ ಈ ವಾರ ಶಾಂಘೈ ಅನ್ನು ಲಾಕ್‌ಡೌನ್ ಮಾಡಿದೆ.