alex Certify ಕೊರೊನಾ 3ನೇ ಅಲೆ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿಯಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ 3ನೇ ಅಲೆ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿಯಿಂದ ಮಹತ್ವದ ಮಾಹಿತಿ

ಕೋವಿಡ್​ 19 ಮೂರನೇ ಅಲೆಯ ಭಯವು ಇರುವ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್​ ವಿಶ್ವದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಯುರೋಪ್​ನ ಅನೇಕ ರಾಷ್ಟ್ರಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಮತ್ತೊಮ್ಮೆ ಏರಿಕೆ ಕಂಡು ಬರ್ತಿದೆ. ಅನೇಕ ಕಾರಣಗಳಿಂದ ಸೋಂಕಿನ ಸಂಖ್ಯೆಯು ಉಲ್ಬಣವಾಗಿದ್ದು ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿಲ್ಲ. ದುರ್ಬಲ ವರ್ಗಗಳಿಗೆ ಲಸಿಕೆ ನೀಡಿರುವುದರಿಂದಲೇ ಸಾವಿನ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ ಎಂದು ಡಾ. ಸೌಮ್ಯ ಹೇಳಿದ್ದಾರೆ.

ವಿಡಿಯೋ ಚಾಟ್‌ ವೇಳೆ ಜನರಿಂದ ಹೆಚ್ಚು ಸುಳ್ಳು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಲಸಿಕೆಯ 2 ಡೋಸ್​ಗಳು ಕನಿಷ್ಟ 1 ವರ್ಷಗಳ ಕಾಲ ಅಥವಾ ಅದಕ್ಕೂ ಸ್ವಲ್ಪ ಹೆಚ್ಚು ದಿನಗಳ ಕಾಲ ನಿಮ್ಮನ್ನು ಕಾಪಾಡಬಲ್ಲದು. ಹೊಸ ಅಧ್ಯಯನಗಳ ಪ್ರಕಾರ ರಕ್ತದಲ್ಲಿನ ಪ್ರತಿಕಾಯಗಳ ಮಟ್ಟ ಕ್ಷೀಣಿಸಲು ಆರಂಭಿಸಿದರೂ ಸಹ ಲಸಿಕೆಯನ್ನು ಪಡೆದವರಲ್ಲಿ ರೋಗ ನಿರೋಧಕ ಶಕ್ತಿಯು ದೀರ್ಘ ಕಾಲದವರೆಗೆ ಇರುತ್ತದೆ ಎಂದು ತಿಳಿದುಬಂದಿದೆ. ಆರೋಗ್ಯವಂತರಿಗೆ ಮಾತ್ರ ಲಸಿಕೆಯು ಅತೀ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಆರೋಗ್ಯವಂತರು ಲಸಿಕೆಯಿಂದ ಕನಿಷ್ಟ ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಿದ್ರು.

ಬೂಸ್ಟರ್​ ಡೋಸ್​ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಇದು ನಿಜಕ್ಕೂ ಒಂದು ಕುತೂಹಲಕಾರಿ ವಿಚಾರವಾಗಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ತಿಳಿಸಲು ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...