ಟೆಕ್ಸಾಸ್‌ನ ಪ್ಲುಗರ್‌ವಿಲ್ಲೆಯಲ್ಲಿರುವ ಬೋಲ್ಸ್ ಮಿಡಲ್ ಸ್ಕೂಲ್‌ನ ಶ್ವೇತವರ್ಣೀಯ ಶಿಕ್ಷಕನನ್ನು ಶಾಲೆಯಿಂದ ವಜಾಗೊಳಿಸಲಾಗಿದೆ, ಅವನು ತನ್ನ ವಿದ್ಯಾರ್ಥಿಗಳಿಗೆ ತಾನು ಶ್ವೇತ ವರ್ಣೀಯ ಜನಾಂಗೀಯನಾಗಿದ್ದು, ತನ್ನ ಜನಾಂಗ ಶ್ರೇಷ್ಠ ಎಂದು ಹೇಳುತ್ತಿದ್ದ. ಇದರ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶಿಕ್ಷಕನನ್ನು ಶಾಲೆಯಿಂದ ವಜಾಗೊಳಿಸಲಾಗಿದೆ.
“ನನ್ನ ಜಾತಿಯೇ ಶ್ರೇಷ್ಠ ಎಂದು ನಾನು ಭಾವಿಸುತ್ತೇನೆ” ಎಂದು ಶಿಕ್ಷಕ ಹೇಳುತ್ತಿರುವುದನ್ನು ವಿದ್ಯಾರ್ಥಿಯೊಬ್ಬ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ. ವಿದ್ಯಾರ್ಥಿಗಳು ಮತ್ತು ಶಿಕ್ಷಕನ ನಡುವಿನ ಸಂಪೂರ್ಣ ಸಂಭಾಷಣೆಯನ್ನು ಆತ ರೆಕಾರ್ಡ್ ಮಾಡಿದ್ದಾನೆ. ಕಳೆದ ಗುರುವಾರ ಈ ಘಟನೆ ನಡೆದಿದೆ. ನಂತರ, ಶಿಕ್ಷಕನನ್ನು ಶಾಲೆಯಿಂದ ವಜಾಗೊಳಿಸಲಾಯಿತು.
ಈ ರೀತಿ ಜನಾಂಗದ ಬಗ್ಗೆ ಮಾತನಾಡುವುದನ್ನು ನಾವೆಂದೂ ಸಹಿಸುವುದಿಲ್ಲ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿದೆ. ಇದರ ಬಗ್ಗೆ ಸುದ್ದಿ ವೈರಲ್ ಆಗುತ್ತಲೇ ಎಲ್ಲಾ ಶಾಲೆಗಳಲ್ಲಿಯೂ ಇಂಥ ಶಿಕ್ಷಕರಿಗೆ ಇದೇ ರೀತಿಯಲ್ಲಿ ಬುದ್ಧಿ ಕಲಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳಲ್ಲಿಯೂ ಇವರು ಜಾತಿ, ಜನಾಂಗದ ವಿಷಬೀಜ ಬಿತ್ತುತ್ತಾರೆ ಎಂದು ಕಮೆಂಟಿಗರು ಹೇಳುತ್ತಿದ್ದಾರೆ.