ಬಿಸಿಬಿಸಿ ಚಹಾ ಜೊತೆ ಏನಾದರೂ ತಿನಿಸು ತಿನ್ನಲು ಬಹುತೇಕ ಜನರಿಗೆ ಇಷ್ಟವಾಗುತ್ತದೆ. ಹಾಗಂತ ಎಲ್ಲಾ ವಿಧದ ಚಹಾಗಳಿಗೂ ಎಲ್ಲಾ ತಿನಿಸು ಹೊಂದುವುದಿಲ್ಲ.
ಕೆಲವು ಚಹಾದ ಜೊತೆ ನಿರ್ದಿಷ್ಟ ತಿಂಡಿ ತಿಂದರೆ ಮಾತ್ರ ಚಹಾದ ನೈಜ ರುಚಿ ನಿಮ್ಮದಾಗುತ್ತದೆ. ಕೆಲವು ಚಹಾಗಳ ಬೆಸ್ಟ್ ಕಾಂಬಿನೇಷನ್ ಸ್ನ್ಯಾಕ್ಸ್ ಇಲ್ಲಿವೆ.
ವೈಟ್ ಟೀ
ತುಂಬಾ ಲೈಟ್ ಫ್ಲೇವರ್ ನ ಈ ಚಹಾದ ಜೊತೆಗೆ ಗ್ರಿಲ್ ಮಾಡಿದ ಫಿಶ್ ಮತ್ತು ಸಲಾಡ್ ಸೇವನೆ ಚೆನ್ನಾಗಿರುತ್ತದೆ. ಹಾಗೂ ಉಪ್ಪಿನಲ್ಲಿ ಹುರಿದ ಪಿಸ್ತಾ ಇದಕ್ಕೆ ಬೆಸ್ಟ್ ಕಾಂಬಿನೇಷನ್.
ಗ್ರೀನ್ ಟೀ
ವಿಭಿನ್ನ ರುಚಿಯ ಈ ಟೀ ಜೊತೆಗೆ ಸೀಫುಡ್ ಅಥವಾ ಹುರಿದ ತರಕಾರಿ ಹೋಳುಗಳನ್ನು ತಿಂದರೆ ರುಚಿಯಾಗಿರುತ್ತದೆ.
ಶುಂಠಿ ಚಹಾ
ಬಿಸಿ ಬಿಸಿ ಜಿಂಜರ್ ಟೀ ಜೊತೆಗೆ ಡಂಪ್ಲಿಂಗ್, ಬನ್ಸ್ ಮತ್ತು ಚೈನೀಸ್ ತಿನಿಸುಗಳನ್ನು ತಿನ್ನಿ.
ಬ್ಲಾಕ್ ಟೀ
ಕಡು ರುಚಿಯ ಕಪ್ಪು ಚಹಾ ಜೊತೆಗೆ ಚೀಸ್ ಆಮ್ಲೇಟ್, ಚೀಸ್ ಗ್ರಿಲ್ಡ್ ಸ್ಯಾಂಡ್ವಿಚ್ ತಿಂದರೆ ಟೇಸ್ಟಿಯಾಗಿರುತ್ತದೆ.
ರೂಬೋಸ್ ಟೀ
ಈ ವೆರೈಟಿಯ ಚಹಾದ ಜೊತೆಗೆ ಬ್ಲೂ ಚೀಸ್ ಮತ್ತು ಚಿಕನ್ ತಿಂದರೆ ರುಚಿಯಾಗಿರುತ್ತದೆ.
ಒಲಾಂಗ್ ಚಹಾ
ಖಡಕ್ ರುಚಿಯ ಒಲಾಂಗ್ ಟೀ ಜೊತೆಗೆ ಫಿಶ್ ಮತ್ತು ಗ್ರಿಲ್ಡ್ ಮಾಂಸ ಮುಂತಾದ ಉಪ್ಪು ರುಚಿಯ ಖಾದ್ಯ ತಿಂದರೆ ಬೆಸ್ಟ್.
ಮಾಚ ಟೀ
ವಿಶೇಷ ಫ್ಲೇವರ್ ನ ಈ ಟೀ ಜೊತೆಗೆ ಪ್ಯಾನ್ ಕೇಕ್ ಮತ್ತು ಫಿಶ್ ಖಾದ್ಯಗಳನ್ನು ತಿನ್ನಿ.