ನಿಮ್ಮ ಮುಖವನ್ನು ದಿನಕ್ಕೆ 2 ಬಾರಿ ತೊಳೆಯುವುದು ಬಹಳ ಮುಖ್ಯ. ಆದರೆ ನಿಮ್ಮ ಚರ್ಮಕ್ಕೆ ಅನುಗುಣವಾಗಿ ಮುಖವನ್ನು ವಾಶ್ ಮಾಡಿದರೆ ಉತ್ತಮ. ಇಲ್ಲವಾದರೆ ಮುಖದ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಯಾವ ವಿಧದ ಚರ್ಮದವರು ಎಷ್ಟು ಬಾರಿ ಮುಖ ವಾಶ್ ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
*ಎಣ್ಣೆಯುಕ್ತ ಚರ್ಮದವರು ನೈಸರ್ಗಿಕ ಎಣ್ಣೆಯನ್ನು ತೆಗೆಯದೆ ಮುಖವನ್ನು ವಾಶ್ ಮಾಡಿದರೆ ಉತ್ತಮ. ನಿಮ್ಮ ಚರ್ಮದಲ್ಲಿ ಮೊಡವೆಗಳು ಮೂಡುತ್ತಿದ್ದರೆ ಕ್ಲೆನ್ಸರ್ ನ್ನು ಬಳಸಿ. ಚರ್ಮದ ಮೇಲೆ ಮೇದೋಗ್ರಂಥಿಗಳ ಸ್ರಾವ ಮತ್ತು ಕಠೋರತೆಯನ್ನು ತೊಡೆದು ಹಾಕಲು ನೀರು ಆಧಾರಿತ ಕ್ಲೆನ್ಸರ್ ನೊಂದಿಗೆ ದಿನಕ್ಕೆ 3 ಬಾರಿ ಮುಖ ವಾಶ್ ಮಾಡಿ.
*ಒಣ ಚರ್ಮದವರು ತುಂಬಾ ಎಚ್ಚರಿಕೆಯಿಂದ ಇರಬೇಕು. ನೀವು ಮುಖ ವಾಶ್ ಮಾಡಲು ತಪ್ಪು ಉತ್ಪನ್ನಗಳನ್ನು ಬಳಸಿದರೆ ಚರ್ಮ ಇನ್ನಷ್ಟು ಒಣಗಬಹುದು. ಡ್ರೈ ಸ್ಕ್ರೀನರ್ ಗಳು, ಆಲ್ಕೋಹಾಲ್ ಮುಕ್ತ ಉತ್ಪನ್ನಗಳನ್ನು ಹಾಗೂ ತೇವಾಂಶವನ್ನು ಹಿಡಿದಿಡುವ ಉತ್ಪನ್ನಗಳನ್ನು ಆಯ್ಕೆ ಮಾಡಿ. ನೀವು ಪ್ರಯಾಣಿಸುವಾಗ ಮುಖಕ್ಕೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಳ್ಳಿ. ದಿನಕ್ಕೆ 2 ಬಾರಿ ಮುಖ ವಾಶ್ ಮಾಡಿ.
*ಒಣ ಮತ್ತು ಎಣ್ಣೆ ಮಿಶ್ರಿತ ಚರ್ಮದವರು ಸರಿಯಾದ ಸಮತೋಲನದಲ್ಲಿರುವ ಸೌಂದರ್ಯ ಉತ್ಪನ್ನಗಳನ್ನು ಬಳಸಿ. ಈ ಚರ್ಮದವರಿಗೆ ಒಂದು ಕಡೆ ಚರ್ಮ ಎಣ್ಣೆಯಿಂದ ಕೂಡಿದ್ದರೆ ಇನ್ನೊಂದು ಕಡೆ ಒಣಗಿರುತ್ತದೆ. ಜೆಲ್ ಆಧಾರಿತ ಫೇಸ್ ವಾಶ್ ಗಳನ್ನು ಬಳಸಿ ದಿನಕ್ಕೆ 2 ಬಾರಿ ಫೇಸ್ ವಾಶ್ ಮಾಡಿ. ವಾಶ್ ಬಳಿಕ ಆಲ್ಕೋಹಾಲ್ ಮುಕ್ತ ಟೋನರ್ ಗಳನ್ನು ಮುಖಕ್ಕೆ ಹಚ್ಚಿ.