ನವದೆಹಲಿ: ಪಡಿತರ ಚೀಟಿದಾರರಿಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ. ಯಾವ ಪಡಿತರ ಅಂಗಡಿ ನಿಮ್ಮ ಮನೆಗೆ ಸಮೀಪದಲ್ಲಿದೆ ಎಂಬುದನ್ನು ಮೇರಾ ರೇಷನ್ ಅಪ್ಲಿಕೇಶನ್ ನಿಂದ ತಿಳಿಯಬಹುದಾಗಿದೆ. ಅಂದ ಹಾಗೆ 5 ಲಕ್ಷ ಮಂದಿ ಈ ಆಪ್ ಬಳಸುತ್ತಿದ್ದಾರೆ.
ನೀವಿರುವ ಹೊಸ ಊರಲ್ಲಿ ನಿಮ್ಮ ಮನೆಯ ಸಮೀಪ ಯಾವ ಪಡಿತರ ಅಂಗಡಿ ಇದೆ. ಹಿಂದೆ ನೀವು ಎಷ್ಟು ಪಡಿತರ ತೆಗೆದುಕೊಂಡಿದ್ದೀರಿ ಎಂಬುದನ್ನು ಆಪ್ ಮೂಲಕ ತಿಳಿಯಬಹುದು. ಅಲ್ಲದೆ ಯಾವುದೇ ದೂರು ಇದ್ದಲ್ಲಿ ಮನೆಯಿಂದಲೇ ನೊಂದಾಯಿಸಬಹುದು.
ಕಳೆದ ತಿಂಗಳು ಭಾರತ ಸರ್ಕಾರ ಮೇರಾ ರೇಷನ್ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ಇದರಲ್ಲಿ ಪಡಿತರ ಚೀಟಿದಾರರಿಗೆ ಹಲವು ಅನುಕೂಲತೆ ಕಲ್ಪಿಸಲಾಗಿದೆ. ಆಪ್ ನಲ್ಲಿ ಕಾರ್ಡುದಾರರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಆಂಡ್ರಾಯ್ಡ್ ಫೋನ್‌ಗಳಿಗಾಗಿ ಮೇರಾ ರೇಷನ್ ಮೊಬೈಲ್ ಅನ್ನು ಬಿಡುಗಡೆ ಮಾಡಲಾಗಿದೆ. ಬಳಕೆದಾರರು ಇದನ್ನು Google Play ಸ್ಟೋರ್ ನಿಂದ ಡೌನ್‌ಲೋಡ್ ಮಾಡಬಹುದು. ಏಪ್ರಿಲ್ 12 ರ ಹೊತ್ತಿಗೆ ದೇಶಾದ್ಯಂತ 5 ಲಕ್ಷ ಕಾರ್ಡ್ ಹೊಂದಿರುವವರು ಈ ಮೊಬೈಲ್ ಆ್ಯಪ್ ಅನ್ನು ಲೋಡ್ ಮಾಡಿದ್ದಾರೆ.
ಈ ಮೊಬೈಲ್ ಅಪ್ಲಿಕೇಶನ್ ವಲಸಿಗರಿಗೆ ತುಂಬಾ ಉಪಯುಕ್ತವಾಗಿದೆ. ಹೊಸ ನಗರದ ಕಾರ್ಡ್ ಹೋಲ್ಡರ್ಗೆ ಯಾವ ಪಡಿತರ ಅಂಗಡಿ ಹತ್ತಿರದಲ್ಲಿದೆ. ನಕ್ಷೆಯ ಸಹಾಯದಿಂದ ಆ ಅಂಗಡಿಯನ್ನು ಸುಲಭವಾಗಿ ತಲುಪಬಹುದು. ಇದರೊಂದಿಗೆ, ನೀವು ಆಹಾರ ಪದಾರ್ಥಗಳ ಬಗ್ಗೆಯೂ ಮಾಹಿತಿಯನ್ನು ಪಡೆಯಬಹುದು. ಈ ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿದೆ. ಅಪ್ಲಿಕೇಶನ್ ಮೂಲಕ ನೀವು ಸಲಹೆ, ಪ್ರತಿಕ್ರಿಯೆ ನೀಡಬಹುದು. ನಿಮ್ಮ ಸಲಹೆಯನ್ನು ಸಾರ್ವಜನಿಕ ವಿತರಣಾ ಸಚಿವಾಲಯವು ಗಣನೆಗೆ ತೆಗೆದುಕೊಳ್ಳಬಹುದು.
ದೇಶಾದ್ಯಂತ 69 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಲಾಭ ಪಡೆಯುತ್ತಿದ್ದಾರೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಭಾಗವಾಗಿ ಮೇರಾ ರೇಷನ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ, ಇದು ರೇಷನ್ ಕಾರ್ಡ್ ಹೊಂದಿರುವವರಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.