ಸುಮಾರು 95 ಪ್ರತಿಶತ ಭಾರತೀಯರು ತಮ್ಮ ಬೆಳಗನ್ನು ಚಹಾ ಮತ್ತು ಕಾಫಿಯೊಂದಿಗೆ ಪ್ರಾರಂಭ ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಬಹುತೇಕರಿಗೆ ಚಹಾ ಅಥವಾ ಕಾಫಿ ಬೇಕು. ಸಂಜೆಯ ಆಯಾಸವನ್ನು ಹೋಗಲಾಡಿಸಲು ಚಹಾ ಅಥವಾ ಕಾಫಿಯನ್ನು ಆಶ್ರಯಿಸುತ್ತಾರೆ. ಆದರೆ ಚಹಾ ಮತ್ತು ಕಾಫಿಯಲ್ಲಿ ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಯಾವುದು ಅನ್ನೋದು ಅನೇಕರನ್ನು ಕಾಡುವ ಪ್ರಶ್ನೆ. ಎರಡರಲ್ಲೂ ಇರುವ ಕೆಫೀನ್ ಪ್ರಮಾಣವನ್ನು ಹೋಲಿಸಿದರೆ, ಕಾಫಿಯಲ್ಲಿರೋ ನಿಕೋಟಿನ್ ಮತ್ತು ಕೆಫೀನ್ ಚಹಾಕ್ಕಿಂತ ಹೆಚ್ಚು. ಚಹಾದಲ್ಲಿ ಕೆಫೀನ್ ಮತ್ತು ನಿಕೋಟಿನ್ ಪ್ರಮಾಣವು ಕಡಿಮೆ. ಏಕೆಂದರೆ ನಾವು ಅದನ್ನು ಫಿಲ್ಟರ್ ಮಾಡುತ್ತೇವೆ.
ಕೆಫೀನ್ – ಕೆಫೀನ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದು ಅನೇಕ ವಿಧದ ಪಾನೀಯಗಳಲ್ಲಿ ಕಂಡುಬರುತ್ತದೆ. ಚಹಾ ಅಥವಾ ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯುತ್ತೀರಿ ಎಂಬುದು ಬಹಳ ಮುಖ್ಯ. 400 ಗ್ರಾಂ ಕೆಫೀನ್ ಮನುಷ್ಯನಿಗೆ ಆರೋಗ್ಯಕರವಾಗಿದೆ, ಇದಕ್ಕಿಂತ ಹೆಚ್ಚು ಕುಡಿದರೆ ಅದು ಆರೋಗ್ಯಕ್ಕೆ ಹಾನಿಕಾರಕ.
ತೂಕ ನಷ್ಟ – ಅನೇಕ ಸಂಶೋಧನೆಗಳ ಪ್ರಕಾರ, ಕೆಫೀನ್ 3-13 ಪ್ರತಿಶತದಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ಕೊಬ್ಬನ್ನು ಸುಡುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಕಾಫಿ ಕುಡಿಯುವುದು ಉತ್ತಮ.
ಉತ್ಕರ್ಷಣ ನಿರೋಧಕ – ಚಹಾ ಮತ್ತು ಕಾಫಿ ಎರಡೂ ಉತ್ಕರ್ಷಣ ನಿರೋಧಕಗಳು. ಇವು ಅನೇಕ ರೀತಿಯ ಹಾನಿಗಳಿಂದ ನಮ್ಮನ್ನು ರಕ್ಷಿಸುತ್ತವೆ. ಇದು ಅನೇಕ ರೋಗಗಳ ಹರಡುವಿಕೆಯನ್ನು ತಡೆಯುತ್ತದೆ.
ಶಕ್ತಿಯ ಮಟ್ಟ ಹೆಚ್ಚಳ – ಚಹಾದಲ್ಲಿ ಕೆಫೀನ್ ಪ್ರಮಾಣ ಕಡಿಮೆ. ಎಲ್-ಥೈನೈನ್ ಸಮೃದ್ಧವಾಗಿದೆ. ಇದು ನಮ್ಮ ಮೆದುಳಿಗೆ ತುಂಬಾ ಒಳ್ಳೆಯದು. ಚಹಾವನ್ನು ಸೇವಿಸಿದರೆ ಕೆಫೀನ್ ಜೊತೆಗೆ ಅದರಲ್ಲಿರುವ ಎಲ್-ಥೈನೈನ್ ಕೂಡ ದೇಹ ಸೇರುವುದರಿಂದ ಅದು ನಮ್ಮನ್ನು ಅಲರ್ಟ್ ಆಗಿ ಎಚ್ಚರವಾಗಿರಿಸುತ್ತದೆ.
ಹಲ್ಲುಗಳ ಮೇಲೆ ಪರಿಣಾಮ – ಕಾಫಿಗಿಂತ ಚಹಾವು ಹಲ್ಲುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಹಲ್ಲುಗಳನ್ನು ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿಸುತ್ತದೆ.
ತಜ್ಞರು ಏನು ಹೇಳುತ್ತಾರೆ ?
ತಜ್ಞರ ಪ್ರಕಾರ, ಚಹಾವು ಕಾಫಿಗಿಂತ ಉತ್ತಮ. ಏಕೆಂದರೆ ಇದು ಕಡಿಮೆ ಕೆಫೀನ್ ಅನ್ನು ಹೊಂದಿರುತ್ತದೆ. ಎರಡನ್ನೂ ತಯಾರಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ದೀರ್ಘಕಾಲ ಇವುಗಳನ್ನು ಕುದಿಸಿದರೆ ಎಂಟಿಒಕ್ಸಿಡೆಂಟ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಇದೆಲ್ಲದರ ಹೊರತಾಗಿ ನಾವು ಇದಕ್ಕೆ ಸೇರಿಸುವ ಸಕ್ಕರೆಯ ಪ್ರಮಾಣವು ಬಹಳಷ್ಟು ವ್ಯತ್ಯಾಸವನ್ನುಂಟುಮಾಡುತ್ತದೆ.
ಚಹಾ ಅಥವಾ ಕಾಫಿ ಯಾವುದು ಬೆಸ್ಟ್ ?
ಚಹಾ ಅಥವಾ ಕಾಫಿ, ಇದು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ. ಆದರೆ ಇವೆರಡರ ಅತಿಯಾದ ಪ್ರಮಾಣವು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅದಕ್ಕಾಗಿಯೇ ಎರಡನ್ನೂ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಒಂದರಿಂದ ಎರಡು ಕಪ್ ಕಾಫಿ ಅಥವಾ ಒಂದರಿಂದ ಎರಡು ಕಪ್ ಟೀ ಕುಡಿಯುವುದು ಒಳ್ಳೆಯದು. ಇದಕ್ಕಿಂತ ಹೆಚ್ಚು ಕುಡಿದರೆ ಅದು ಆರೋಗ್ಯಕ್ಕೆ ಹಾನಿಕರ.