ಕ್ಯಾಪ್ಸಿಕಂ ಅತ್ಯಂತ ಬೇಡಿಕೆಯ ತರಕಾರಿಗಳಲ್ಲೊಂದು. ಅದರ ವಿವಿಧ ಬಣ್ಣಗಳು ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹಸಿರು, ಕೆಂಪು, ಹಳದಿ, ಕಿತ್ತಳೆ ಮತ್ತು ಕಪ್ಪು ಹೀಗೆ ಹಲವು ಬಣ್ಣಗಳಲ್ಲಿ ಕ್ಯಾಪ್ಸಿಕಂ ಲಭ್ಯವಿದೆ. ಒಂದೊಂದು ಬಣ್ಣದ ಕ್ಯಾಪ್ಸಿಕಂ ಒಂದೊಂದು ತೆರನಾದ ಪೋಷಕಾಂಶಗಳನ್ನು ಹೊಂದಿರುತ್ತದೆ. ವಿಭಿನ್ನ ಆರೋಗ್ಯ ಪ್ರಯೋಜನಗಳನ್ನು ಇವು ನೀಡುತ್ತವೆ. ಈ ಐದು ಬಣ್ಣದ ಕ್ಯಾಪ್ಸಿಕಂನಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂದು ತಿಳಿಯೋಣ.
ಕೆಂಪು ಕ್ಯಾಪ್ಸಿಕಂ – ಈದು ಕ್ಯಾಪ್ಸೈಸಿನ್ ಮತ್ತು ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತದೆ. ಇದರ ಬಣ್ಣ ನೋಡಿಯೇ ಜನರು ಆಕರ್ಷಿತರಾಗ್ತಾರೆ. ಕೆಂಪು ಕ್ಯಾಪ್ಸಿಕಂ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಹಸಿರು ಕ್ಯಾಪ್ಸಿಕಂ – ಇದು ವಿಟಮಿನ್ ಸಿ ಮತ್ತು ಕ್ಲೋರೊಫಿಲ್ ಅನ್ನು ಹೊಂದಿರುತ್ತದೆ. ಹಸಿರು ಕ್ಯಾಪ್ಸಿಕಂ ಕೂಡ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹಳದಿ ಕ್ಯಾಪ್ಸಿಕಂ – ಇದು ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತದೆ. ಹಾಗಾಗಿ ಕಣ್ಣುಗಳಿಗೆ ಪ್ರಯೋಜನಕಾರಿ, ಹಳದಿ ಕ್ಯಾಪ್ಸಿಕಂ ನಮ್ಮ ರೆಟಿನಾವನ್ನು ರಕ್ಷಿಸುತ್ತದೆ.
ಕಪ್ಪು ಕ್ಯಾಪ್ಸಿಕಂ – ಕಪ್ಪು ಕ್ಯಾಪ್ಸಿಕಂ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡಬಲ್ಲದು. ಯಾಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳಿವೆ.
ಕಿತ್ತಳೆ ಕ್ಯಾಪ್ಸಿಕಂ – ಬೀಟಾ ಕ್ಯಾರೋಟಿನ್ ಇದರಲ್ಲಿ ಕಂಡುಬರುತ್ತದೆ. ಕಿತ್ತಳೆ ಬಣ್ಣದ ಕ್ಯಾಪ್ಸಿಕಂನಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.ಇದು ರೆಟಿನಾವನ್ನು ರಕ್ಷಿಸುತ್ತದೆ.
ಕೆಂಪು ಕ್ಯಾಪ್ಸಿಕಂ – ಸಂಶೋಧನೆಗಳ ಪ್ರಕಾರ ಕೆಂಪು ಬಣ್ಣದ ಕ್ಯಾಪ್ಸಿಕಂನಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿವೆ. ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಪ್ರಮಾಣವು ಹಸಿರು ಕ್ಯಾಪ್ಸಿಕಂಗಿಂತಲೂ ಹೆಚ್ಚು. ಆದ್ದರಿಂದ ಕೆಂಪು ಕ್ಯಾಪ್ಸಿಕಂ ಸೇವನೆಯು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ.