alex Certify ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ ಔಷಧಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ ಔಷಧಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ? ಇಲ್ಲಿದೆ ವಿವರ

ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗುವುದು ಅವರು ಕೊಡುವ ತರಹೇವಾರಿ ಔಷಧಗಳನ್ನು ಸೇವಿಸುವುದು ಇವೆಲ್ಲ ಸಾಮಾನ್ಯ ಪ್ರಕ್ರಿಯೆ. ಆದರೆ ನಾವು ಸೇವಿಸುತ್ತಿರುವ ಔಷಧಿ ಯಾವುದು ? ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ ಔಷಧಿಗಳ ನಡುವಿನ ವ್ಯತ್ಯಾಸವೇನು ಇವೆಲ್ಲವನ್ನು ತಿಳಿದುಕೊಂಡಿರಬೇಕು.

ಹೋಮಿಯೋಪತಿ

ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಹೋಮಿಯೋಪತಿ ಎಂದರೆ ಸಣ್ಣ ಬಿಳಿ ಮಾತ್ರೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಸಸ್ಯಗಳು ಮತ್ತು ಖನಿಜಗಳಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ಹಠಾತ್ ರೋಗಗಳ ಜೊತೆಗೆ ಜ್ವರ, ಕೆಮ್ಮು, ಸಂಧಿವಾತ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗೆ ಹೋಮಿಯೋಪತಿ ಔಷಧಿಗಳು ಪ್ರಯೋಜನಕಾರಿಯಾಗಿವೆ.

ಹೋಮಿಯೋಪತಿ ಯಾವುದೇ ಸೈಡ್‌ ಎಫೆಕ್ಟ್‌ಗಳಿಲ್ಲದ ಚಿಕಿತ್ಸಾ ವಿಧಾನ. ಮಕ್ಕಳು, ವಯಸ್ಕರು ಹೀಗೆ ಎಲ್ಲಾ ವಯಸ್ಸಿನ ಜನರೂ ಇದನ್ನು ಸೇವಿಸಬಹುದು.

ಅಲೋಪತಿ

ಹೆಚ್ಚಿನ ಜನರು ಅಲೋಪತಿಯನ್ನು ಅವಲಂಬಿಸುತ್ತಾರೆ. ಏಕೆಂದರೆ ಇದು ಸಮಸ್ಯೆಯನ್ನು ತಕ್ಷಣವೇ ಗುಣಪಡಿಸುತ್ತದೆ, ಆದರೆ ರೋಗವು ಅದರ ಬೇರು ಸಮೇತ ನಿರ್ಮೂಲನೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಅಲೋಪತಿ ಔಷಧಗಳನ್ನು ಸಾಮಾನ್ಯ ಭಾಷೆಯಲ್ಲಿ ಇಂಗ್ಲಿಷ್ ಔಷಧಿ ಎಂದೂ ಕರೆಯುತ್ತಾರೆ. ಇದು ರೋಗವನ್ನು ಸ್ವಲ್ಪ ಸಮಯದವರೆಗೆ ಗುಣಪಡಿಸುತ್ತದೆ. ಅಲೋಪತಿ ಔಷಧಗಳು ರೋಗದ ಲಕ್ಷಣಗಳ ಮೇಲೆ ಕೆಲಸ ಮಾಡುತ್ತವೆ.

ಅಲೋಪತಿ ಔಷಧಿಗಳಿಂದ ತ್ವರಿತ ಪರಿಹಾರ ಸಿಗುತ್ತದೆ. ಇದರಲ್ಲಿ ಪರಿಣಾಮಕಾರಿ ಶಸ್ತ್ರಚಿಕಿತ್ಸೆಯ ವಿಧಾನಗಳೂ ಇವೆ. ಚುಚ್ಚುಮದ್ದು ಮತ್ತು ಪ್ರತಿಜೀವಕಗಳು ಅದರ ಸಾಧನಗಳಾಗಿವೆ.

ಆಯುರ್ವೇದ

ಆಯುರ್ವೇದದ ಮೂಲಕ ಮಾಡುವ ಚಿಕಿತ್ಸೆಯು ತುಂಬಾ ನಿಧಾನ. ಆದರೆ ಕಾಯಿಲೆಯನ್ನು ಬೇರು ಸಮೇತ ನಿರ್ಮೂಲನೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿದೆ. ನಿಧಾನಗತಿಯ ಪರಿಣಾಮ, ದೀರ್ಘ ಕೋರ್ಸ್ ಮತ್ತು ದುಬಾರಿ ಗಿಡಮೂಲಿಕೆಗಳಿಂದಾಗಿ ಜನರು ಆಯುರ್ವೇದದ ಕಡೆಗೆ ಹೆಚ್ಚು ಒಲವು ತೋರುತ್ತಿರಲಿಲ್ಲ. ಆದರೆ ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಎಲ್ಲರೂ ಆಯುರ್ವೇದ ಮನೆಮದ್ದುಗಳ ಮೊರೆಹೋಗಿದ್ದರು.

ಆಯುರ್ವೇದ ಔಷಧಿಗಳಲ್ಲಿ ಅಡ್ಡ ಪರಿಣಾಮಗಳು ಕಡಿಮೆ. ಇದರಲ್ಲಿ ಯಾವುದೇ ರೀತಿಯ ರಾಸಾಯನಿಕವನ್ನು ಬಳಸುವುದಿಲ್ಲ, ಎಲ್ಲಾ ಔಷಧಿಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಹಲವು ಮನೆಮದ್ದುಗಳೂ ಸೇರಿಕೊಂಡಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...