![](https://kannadadunia.com/wp-content/uploads/2023/06/e4a20ffd-053d-4164-a331-35eecbfa28c1-1.jpg)
ಅಡುಗೆ ಮನೆಯ ಪರಿಕರಗಳಲ್ಲಿ ಚಾಕು ಒಂದು ಮುಖ್ಯವಾದ ಸಾಧನ. ಅದಿಲ್ಲದ ಅಡುಗೆ ಮನೆಯನ್ನು ಊಹಿಸೋಕೆ ಸಾಧ್ಯ ಇಲ್ಲ. ಇನ್ನೂ ಚಕ ಚಕ ಎಂದು ತರಕಾರಿ ಕತ್ತರಿಸಲು ಚಾಕು ಹರಿತವಾಗಿ ಇಲ್ಲದೆ ಹೋದರೆ ಏನು ಪ್ರಯೋಜನ ?
ಇಂದು ಅನೇಕ ಬಗೆಯ ಚಾಕುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮುಖ್ಯವಾಗಿ ಸ್ಟೀಲ್ ಚಾಕು ಹಾಗೂ ಕಬ್ಬಿಣದ ಚಾಕು ಇವೆರಡರಲ್ಲಿ ಯಾವುದು ಸೂಕ್ತ ? ಇಲ್ಲಿದೆ ಉತ್ತರ.
ಸ್ಟೀಲ್ ಚಾಕು ಕೊಂಡುಕೊಳ್ಳುವುದಾದರೆ ತುಸು ಅಗಲ ಅಲಗಿನ ಚಾಕು ಕೊಂಡುಕೊಂಡರೆ ಅದರ ಹರಿತ ಹೆಚ್ಚು ಕಾಲ ಉಳಿಯುತ್ತದೆ.
ಕಬ್ಬಿಣದ ಚಾಕು ಬಳಸುವುದೇ ಆದರೆ ಅದಕ್ಕೆ ನಿರ್ವಹಣೆ ಅಗತ್ಯ. ಪ್ರತಿ ಬಾರಿ ಚಾಕು ಉಪಯೋಗ ಮುಗಿದ ಮೇಲೆ ಅದನ್ನು ಚೆನ್ನಾಗಿ ಸ್ವಚ್ಚಗೊಳಿಸಿ ನೀರಿಲ್ಲದ ಹಾಗೆ ಒರೆಸಿಡಬೇಕು.
ಇಲ್ಲದೆ ಹೋದರೆ ಬಹಳ ಬೇಗ ತುಕ್ಕು ಹಿಡಿಯಬಹುದು. ಹೀಗೆ ತುಕ್ಕು ಹಿಡಿದ ಚಾಕು ಬಳಸುವುದು ಕೂಡ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ.
ಚಾಕು ತುಕ್ಕು ಹಿಡಿಯದ ಹಾಗೆ ಇರಬೇಕು ಅಂದರೆ ಕನಿಷ್ಠ ಮೂರ್ನಾಲ್ಕು ದಿನಗಳಿಗೆ ಒಮ್ಮೆ ಚಾಕು ಸ್ವಚ್ಛಗೊಳಿಸಿದ ನಂತರ ಸ್ವಲ್ಪ ಎಣ್ಣೆ ಸವರಿ ಇಡುವ ಅಭ್ಯಾಸ ಮಾಡಿ. ಇದರಿಂದ ಚಾಕು ತುಕ್ಕು ಹಿಡಿಯುವ ಸಂಭವ ಇರುವುದಿಲ್ಲ.
ಚಾಕು ಅಡುಗೆ ಮನೆಗೆ ಎಷ್ಟು ಮುಖ್ಯವೋ ಅದರ ನಿರ್ವಹಣೆ ಕೂಡ ಅಷ್ಟೇ ಮುಖ್ಯ.