ಟ್ವಿಟರ್‌ನ ಪ್ರತಿಷ್ಠಿತ ನೀಲಿ ಟಿಕ್ಅನ್ನು ಬಹಳಷ್ಟು ಮಂದಿಯ ಖಾತೆಗಳಿಂದ ತೆಗೆದು ಹಾಕಲಾಗುತ್ತಿದೆ. ಏಪ್ರಿಲ್ 20ರ ವೇಳೆಗೆ ಈ ಲಿಗಾಸಿ ಟಿಕ್ ಮಾರ್ಕ್‌ಗಳನ್ನು ತೆಗೆದು ಹಾಕಲು ಟ್ವಿಟರ್ ಉದ್ದೇಶಿಸಿತ್ತು.
ಏಪ್ರಿಲ್ 21ರಿಂದ ಬಹಳಷ್ಟು ಉದ್ಯಮಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ತಂತಮ್ಮ ಟ್ವಿಟರ್ ಹ್ಯಾಂಡಲ್‌ಗಳ ಮುಂದೆ ಇದ್ದ ಟಿಕ್ ಗುರುತುಗಳನ್ನು ಕಳೆದುಕೊಂಡಿದ್ದಾರೆ.
ಟಾಟಾ ಸಮೂಹದ ಮಾಜಿ ಚೇರ್ಮನ್ ರತನ್ ಟಾಟಾ, ಉದಯ್ ಕೋಟಕ್ ಸೇರಿದಂತೆ ಬಹಳಷ್ಟು ದೊಡ್ಡ ಉದ್ಯಮಿಗಳು ಸಹ ಇದಕ್ಕೆ ಹೊರತಾಗಿಲ್ಲ.
ಈ ನೀಲಿ ಟಿಕ್ ಕಳೆದುಕೊಂಡ ಉದ್ಯಮ ಕ್ಷೇತ್ರದ ದಿಗ್ಗಜರ ಹೆಸರುಗಳು ಇಂತಿವೆ :
ರತನ್ ಟಾಟಾ, ಉದಯ್ ಕೋಟಕ್, ನಿಖಿಲ್ ಕಾಮತ್, ರಿಶದ್ ಪ್ರೇಮ್‌ಜೀ, ಸಿ ಪಿ ಗುರ್ನಾನಿ, ದೀಪೀಂದರ್ ಗೋಯಲ್, ಗೌತಮ್ ಸಿಂಘಾನಿಯಾ, ನಂದನ್ ನಿಲೇಕಣಿ, ಅನುಪಮ್ ಮಿತ್ತಲ್
ನೀಲಿ ಟಿಕ್‌ಗಳನ್ನು ಹಾಗೇ ಕಾಯ್ದುಕೊಂಡ ಉದ್ಯಮಿಗಳ ಪಟ್ಟಿ:
ಆನಂದ್ ಮಹಿಂದ್ರಾ, ಹರ್ಷ್ ಗೋಯೆಂಕಾ, ಭಾವಿಶ್ ಅಗರ್ವಾಲ್, ಹರ್ಷ್ ಮರಿವಾಲಾ, ನಿತಿನ್ ಕಾಮತ್.
ಜಾಗತಿಕ ಮಟ್ಟದಲ್ಲಿ ಬರುವುದಾದರೆ; ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್, ಟ್ವಿಟರ್ ಸಹ ಸ್ಥಾಪಕ ಜಾಕ್ ಡೋರ್ಸೆ ಹಾಗೂ ಜೋ ಉಕುಜ಼ೋಲು (ಡೆಲಾಯ್ಟ್ ಸಿಇಓ) ಸಹ ತಂತಮ್ಮ ಟ್ವಿಟರ್ ಹ್ಯಾಂಡಲ್‌ಗಳ ಮುಂದಿದ್ದ ನೀಲಿ ಟಿಕ್ ಕಳೆದುಕೊಂಡಿದ್ದಾರೆ.
ತನ್ನ ಪ್ರತಿಷ್ಠಿತ ನೀಲಿ ಟಿಕ್ ಗುರುತನ್ನು ಉಳಿಸಿಕೊಂಡು ಹೋಗಬೇಕಾದಲ್ಲಿ ಹೊಸದಾಗಿ ತಂದಿರುವ ’ಟ್ವಿಟರ್ ಬ್ಲೂ’ ಯೋಜನೆಯ ಚಂದಾದಾರರಾಗಬೇಕಾಗಿದೆ. ಭಾರತದಲ್ಲಿ ಟ್ವಿಟರ್ ಬ್ಲೂನ ಚಂದಾದಾರಿಕೆ ಬೇಕಾದಲ್ಲಿ, ಆಂಡ್ರಾಯ್ಡ್ ಬಳಕೆದಾರರು ಮಾಸಿಕ 650 ರೂ. ಹಾಗೂ ಐಓಎಸ್ ಬಳಕೆದಾರರು ಮಾಸಿಕ 900 ರೂ. ಪಾವತಿಸಬೇಕಾಗುತ್ತದೆ.
ಬ್ಲೂ ಟಿಕ್ ಜೊತೆಗೆ, ಟ್ವೀಟ್‌ಗಳ ಎಡಿಟಿಂಗ್, ಉದ್ದನೆಯ ವಿಡಿಯೋಗಳನ್ನು ಪೋಸ್ಟ್ ಮಾಡುವ ಆಯ್ಕೆ, ಕಡಿಮೆ ಜಾಹೀರಾತುಗಳು ಸೇರಿದಂತೆ ಅನೇಕ ಪ್ರಯೋಜನಗಳನ್ನು ಟ್ವಿಟರ್ ತನ್ನ ’ಟ್ವಿಟರ್ ಬ್ಲೂ’ ಯೋಜನೆಯಲ್ಲಿ ಕೊಡಮಾಡುತ್ತದೆ.