ಬೇಸಿಗೆಯಲ್ಲಿ ಸಾಮಾನ್ಯ ವಾಗಿ ಬರುವ ಟೈಫಾಯ್ಡ್ ನಂಥ ಜ್ವರ ನಿಮ್ಮ ದೇಹದ ಉಷ್ಣತೆ ಹೆಚ್ಚುವುದರ ಪರಿಣಾಮ ಎಂಬುದು ನಿಮಗೆ ತಿಳಿದಿರಲಿ. ಹಾಗಾಗಿ ಬೇಸಿಗೆಯಲ್ಲಿ ಈ ಕೆಲವು ಆಹಾರಗಳನ್ನು ಸೇವಿಸಲು ಮರೆಯದಿರಿ.
ಬೇಸಿಗೆಯಲ್ಲಿ ನೀವು ಹೆಚ್ಚು ತರಕಾರಿ, ಹಣ್ಣು ಹಾಗೂ ದ್ವಿದಳ ಧಾನ್ಯಗಳನ್ನು ಸೇವಿಸುವುದು ಎಷ್ಟು ಒಳ್ಳೆಯದೋ ಅದೇ ರೀತಿ ನಾರಿನಂಶ ಹೆಚ್ಚಿರುವ ವಸ್ತುಗಳನ್ನೂ ಸೇವಿಸಿ. ಊಟ ಒಮ್ಮೆ ಮಾಡಿದರೂ ಸಾಕು. ಉಳಿದಂತೆ ಹಸಿ ತರಕಾರಿಗಳನ್ನೇ ತಿನ್ನಿ.
ಅವುಗಳ ಪೈಕಿ ಟೊಮೆಟೊ, ಮುಳ್ಳುಸೌತೆ, ಕಲ್ಲಂಗಡಿ, ಸೇಬು, ಗೆಣಸು, ಪೇರಳೆ ಹಣ್ಣುಗಳಿಗೆ ಮೊದಲ ಆದ್ಯತೆ ನೀಡಿ. ಕ್ಯಾರೆಟ್ ಈರುಳ್ಳಿ ಸಲಾಡ್ ಮಾಡಿಕೊಂಡು ತಿನ್ನಿ. ಜಂಕ್ ಫುಡ್ ಗಳಿಂದ ಕಡ್ಡಾಯವಾಗಿ ದೂರವಿರಿ.
ಬೇಸಿಗೆಯಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಕುಡಿಯಲು ಮರೆಯದಿರಿ. ಎರಡು ದಿನಕ್ಕೊಂದಾದರೂ ಎಳನೀರು ಕುಡಿಯಿರಿ. ಬೇಸಗೆಯಲ್ಲಿ ಸೆಕೆ ಎಂಬ ಕಾರಣಕ್ಕೆ ವ್ಯಾಯಾಮವನ್ನು ನಿಲ್ಲಿಸದಿರಿ. ನಿತ್ಯ ಮಾಡುವ ಯೋಗ ಹಾಗೂ ವಾಕಿಂಗ್ ಮಾಡಿ ದೇಹಾರೋಗ್ಯ ಕಾಪಾಡಿಕೊಳ್ಳಿ.