ವಿಶ್ವದಾದ್ಯಂತ ಅನೇಕ ಜೀವಿಗಳಿವೆ. ಅವುಗಳಲ್ಲಿ ಕೆಲವು ತಮ್ಮ ವಿಶೇಷತೆಯಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿವೆ.ಅನೇಕ ಬಗೆಯ ಹಕ್ಕಿಗಳನ್ನು ನಾವು ನೋಡಿರ್ತೇವೆ. ಆದ್ರೆ ಎಲ್ಲ ಹಕ್ಕಿಗಳನ್ನು ಸೂಕ್ಷ್ಮವಾಗಿ ಗಮನಿಸಲು ಹೋಗುವುದಿಲ್ಲ.ಒಂದು ಹಕ್ಕಿ,ಇಡೀ ಜೀವಮಾನದಲ್ಲಿ ನೆಲದ ಮೇಲೆ ಕಾಲಿಡುವುದಿಲ್ಲ ಎಂದ್ರೆ ನಂಬ್ತೀರಾ?
ವಿಚಿತ್ರವೆನಿಸಿದ್ರೂ,ಇದು ಸತ್ಯ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಹಕ್ಕಿಯನ್ನು ಮಹಾರಾಷ್ಟ್ರದಲ್ಲಿ ಹಲವು ಬಾರಿ ನೋಡಲಾಗಿದೆ. ಈ ಹಕ್ಕಿ ಹೆಸರು ಹರಿಯಲ್. ಇದು ಎಂದಿಗೂ ಭೂಮಿಯ ಮೇಲೆ ಕಾಲಿಡುವುದಿಲ್ಲ. ಈ ಪಕ್ಷಿಗಳು ಎತ್ತರದ ಮರಗಳನ್ನು ಹೊಂದಿರುವ ಕಾಡುಗಳಲ್ಲಿ ಇರುವುದು ಹೆಚ್ಚು. ಹಿಂಡುಗಳಲ್ಲಿ ಮಾತ್ರ ಕಂಡುಬರುವ ಹರಿಯಲ್ ಪಕ್ಷಿಗಳು ಮರಗಳ ಮೇಲಿರ್ತವೆ.
ಹರಿಯಲ್ ಪಕ್ಷಿಯ ವೈಜ್ಞಾನಿಕ ಹೆಸರು ಟ್ರೆರಾನ್ ಫೀನಿಕೊಪ್ಟೆರಾ. ಇದು ಮೊಲದ ಗಾತ್ರವಿದ್ದು, 29 ರಿಂದ 33 ಸೆಂಟಿಮೀಟರ್ ನಡುವೆ ಇರುತ್ತದೆ. ಹಳದಿ ಕಾಲುಗಳು ಮತ್ತು ಪಾರಿವಾಳದಂತಹ ನೋಟವನ್ನು ಹೊಂದಿರುತ್ತದೆ. ಬಾಲದ ಉದ್ದ 8 ರಿಂದ 10 ಸೆಂಟಿಮೀಟರ್ ಇದ್ದು, ತೂಕ 225 ರಿಂದ 260 ಗ್ರಾಂ ಇರುತ್ತದೆ. ಹಕ್ಕಿಯ ಕುತ್ತಿಗೆ ಚಿನ್ನದ ಹಳದಿ ಬಣ್ಣ ಹೊಂದಿದೆ.