ರಾಯ್ಪುರ(ಛತ್ತೀಸ್ ಗಢ): ಛತ್ತೀಸ್ ಗಢದ ರಾಯ್ ಪುರ್ ನಲ್ಲಿ ಬುಧವಾರ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಹಿಂದಿರುಗುತ್ತಿದ್ದ ನಟ ಸೂರಜ್ ಮೆಹರ್ ಕಾರು ಪಿಕಪ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.
ಮಾಹಿತಿಯ ಪ್ರಕಾರ ಒಡಿಶಾದಲ್ಲಿ ನಡೆಯಬೇಕಿದ್ದ ಸೂರಜ್ ಮೆಹರ್ ನಿಶ್ಚಿತಾರ್ಥದ ದಿನದಂದು ಈ ಅಪಘಾತ ಸಂಭವಿಸಿದೆ. ಪೈಪೆಡುಲಾ ಬಳಿಯ ಸರ್ಶಿವ ಪ್ರದೇಶದಿಂದ ಬರುತ್ತಿದ್ದ ಪಿಕಪ್ ಟ್ರಕ್ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಸೂರಜ್ ಅವರಿಗೆ 40 ವರ್ಷ ವಯಸ್ಸಾಗಿತ್ತು. ಆರಂಭಿಕ ವರದಿಗಳ ಪ್ರಕಾರ, ನಾರದ್ ಮೆಹರ್ ಎಂದೂ ಕರೆಯಲ್ಪಡುವ ಸೂರಜ್ ಮೆಹರ್ ತಮ್ಮ “ಆಖ್ರಿ ಫೈಸ್ಲಾ” ಚಿತ್ರದ ಚಿತ್ರೀಕರಣದಿಂದ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸೂರಜ್ ಅವರು ಒಡಿಶಾದ ಬಾತ್ಲಿಯಲ್ಲಿ ಬುಧವಾರ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿತ್ತು…ಆದರೆ ವಿಧಿ ಬರಹವೇ ಬೇರೆಯಾಗಿತ್ತು.
ಸೂರಜ್ ಮೆಹರ್ ಛತ್ತೀಸ್ ಗಢದಲ್ಲಿ ಖಳನಾಯಕನಾಗಿ ಹೆಸರುವಾಸಿಯಾಗಿದ್ದರು. ಅವರು ಹಲವಾರು ಚಲನಚಿತ್ರಗಳಲ್ಲಿ ನೆಗೇಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿಲಾಸ್ಪುರದ ಸರಸಿವಾ ಪ್ರದೇಶದಿಂದ ಅವರ ವಾಹನವು ಪಿಕಪ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸೂರಜ್ ಮೆಹರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.