ರತ್ನ ತೀರ್ಥ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಈ ಟ್ರೈಲರ್ ನೋಡುಗರ ಗಮನ ಸೆಡೆಯುವುದಲ್ಲದೆ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.
ಕಾಮಿಡಿ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಿಷಿ, ಋಷಿಕರಾಜ್, ಶೌರ್ಯ, ಶಂಕರ್ ಅಶ್ವಥ್ ತೆರೆ ಹಂಚಿಕೊಂಡಿದ್ದು, ಜನನಿ ಫಿಲಂಸ್ ಬ್ಯಾನರ್ ನಲ್ಲಿ ಪ್ರಶಾಂತ್ ಬಿಜೆ ನಿರ್ಮಾಣ ಮಾಡಿದ್ದಾರೆ. ಉಜ್ವಲ್ ಚಂದ್ರ ಸಂಕಲನ, ಡಿಪರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಸತೀಶ್ ರಾಜೇಂದ್ರ ಹಾಗೂ ಕಿರಣ್ ಹಂಪಾಪುರ ಛಾಯಾಗ್ರಹಣ, ಹಾಗೂ ಇಮ್ರಾನ್ ಸರ್ಧಾರಿಯಾ ಮತ್ತು ನಾಗರಾಜ್ ನೃತ್ಯ ನಿರ್ದೇಶನವಿದೆ.