ಪ್ರಯಾಗರಾಜ್: ಲೈಂಗಿಕ ತೃಪ್ತಿಗೆ ಸಂಗಾತಿಯ ಬಳಿ ಬಿಟ್ಟು ಹಿನ್ನೆಲೆಗೆ ಹೋಗಬೇಕು ಎಂದು ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿದೆ.
ಪುರುಷನೊಬ್ಬನ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಆರೋಪ ರದ್ದುಗೊಳಿಸುವ ಸಂದರ್ಭದಲ್ಲಿ ನಾಗರಿಕ ಸಮಾಜದಲ್ಲಿ ವ್ಯಕ್ತಿ ತನ್ನ ದೈಹಿಕ ಮತ್ತು ಲೈಂಗಿಕ ಬಯಕೆಗಳನ್ನು ಈಡೇರಿಸಿಕೊಳ್ಳಲು ಸಂಗಾತಿ ಬಳಿ ಅಲ್ಲದೆ ಮತ್ತೆಲ್ಲಿಗೆ ಹೋಗಬೇಕು ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಪ್ರಕರಣದಲ್ಲಿನ ಆರೋಪಗಳನ್ನು ವೈಯಕ್ತಿಕ ವ್ಯಾಜ್ಯದ ಕಾರಣಕ್ಕಾಗಿ ಹೊರಿಸಿರುವ ಸಾಧ್ಯತೆ ಇದೆ ಎಂದು ಹೈಕೋರ್ಟ್ ತಿಳಿಸಿದೆ. ಎಫ್ಐಆರ್ ನೊಂದಿಗೆ ನೀಡಿರುವ ಪುರಾವೆಗಳು, ಸಾಕ್ಷಿಗಳು ನೀಡಿರುವ ಹೇಳಿಕೆಗಳು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಹೇಳಿಕೆಗೆ ಪೂರಕವಾಗಿ ಒದಗಿ ಬಂದಿಲ್ಲ ಎಂದು ಹೇಳಿರುವ ನ್ಯಾಯಮೂರ್ತಿ ಅನೀಶ್ ಕುಮಾರ್ ಗುಪ್ತಾ ಅವರು ಪ್ರಾಂಜಲ್ ಶುಕ್ಲಾ ಮತ್ತು ಇಬ್ಬರು ಇತರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದ್ದಾರೆ.
ಪ್ರಾಥಮಿಕ ಆರೋಪಗಳು ದಂಪತಿಯ ಲೈಂಗಿಕ ಸಂಬಂಧದ ಸುತ್ತ, ಕೆಲವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪತ್ನಿ ಒಪ್ಪಿಗೆ ನೀಡಿರುವುದಕ್ಕೆ ಸಂಬಂಧಿಸಿದೆ. ವರದಕ್ಷಿಣೆಗೆ ಬೇಡಿಕೆ ಇಡಿ ಇರಿಸಲಾಗಿತ್ತು ಎನ್ನುವುದನ್ನು ಇವು ಹೇಳುತ್ತಿಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಈ ಆರೋಪ ಮಾಡಿದಂತಿದೆ ಎಂದು ತಿಳಿಸಿದೆ.