alex Certify ಸಾನಿಯಾ ಮಿರ್ಜಾ- ಶೋಯೆಬ್ ಮಲಿಕ್ ಅವರ ದಾಂಪತ್ಯದಲ್ಲಿ ಬಿರುಕು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾನಿಯಾ ಮಿರ್ಜಾ- ಶೋಯೆಬ್ ಮಲಿಕ್ ಅವರ ದಾಂಪತ್ಯದಲ್ಲಿ ಬಿರುಕು….?

ಭಾರತದ ಟೆನಿಸ್ ಪಟು ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ಕೆಲ ದಿನಗಳಿಂದ ಹರಿದಾಡ್ತಿದೆ. ಇದಕ್ಕೆ ಇಂಬು ನೀಡುವಂತೆ ಸಾನಿಯಾ ಮಿರ್ಜಾ ಇನ್ ಸ್ಟಾಗ್ರಾಂ ನಲ್ಲಿ ಹಾಕಿರುವ ಪೋಸ್ಟ್ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.“Where do broken hearts go. To find Allah”. “ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನನ್ನು ಹುಡುಕಲು”. ಎಂದು ಸಾನಿಯಾ ಮಿರ್ಜಾ ಪೋಸ್ಟ್ ಮಾಡಿದ್ದು ಟೆನಿಸ್ ತಾರೆ ಹಾಗು ಶೋಯೆಬ್ ಮಲಿಕ್ ಹೃದಯ ಒಡೆದಿದೆಯಾ ಎಂಬ ಪ್ರಶ್ನೆ ಏಳಲು ಕಾರಣವಾಗಿದೆ.

ಸದ್ಯಕ್ಕೆ ಅವರ ಸಂಬಂಧ ಹಳಸಿರುವ ಹಿಂದಿನ ನಿಖರವಾದ ಕಾರಣ ತಿಳಿದಿಲ್ಲ. ಆದಾಗ್ಯೂ, ಪಾಕಿಸ್ತಾನದ ಕೆಲವು ಮಾಧ್ಯಮ ವರದಿಗಳು ಶೋಯೆಬ್ ಮಲಿಕ್ ಸಾನಿಯಾಗೆ ಮೋಸ ಮಾಡಿದ್ದಾನೆ ಮತ್ತು ದಂಪತಿಗಳು ಈಗಾಗಲೇ ಕೆಲ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿ ಮಾಡುತ್ತಿವೆ. ಆದರೆ ಇಲ್ಲಿಯವರೆಗೆ ವದಂತಿ ಬಗ್ಗೆ ಇಬ್ಬರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಸಾನಿಯಾ ಮತ್ತು ಶೋಯೆಬ್ ಅವರು ಏಪ್ರಿಲ್ 2010 ರಲ್ಲಿ ವಿವಾಹವಾದರು. ಆ ಸಮಯದಲ್ಲಿ ಅವರ ವಿವಾಹವು ಎರಡು ರಾಷ್ಟ್ರಗಳನ್ನು (ಭಾರತ ಮತ್ತು ಪಾಕಿಸ್ತಾನ) ಸಂಪರ್ಕಿಸುವ ಮೂಲಕ ದೊಡ್ಡ ವಿವಾದವನ್ನು ಸೃಷ್ಟಿಸಿತು. ಶೋಯೆಬ್ ಪಾಕಿಸ್ತಾನಿಯಾಗಿದ್ದು, ಸಾನಿಯಾ ಭಾರತಕ್ಕೆ ಸೇರಿದವರು. ದಂಪತಿಗೆ ಈಗ ನಾಲ್ಕು ವರ್ಷದ ಮಗನಾದ ಇಝಾನ್ ಇದ್ದು ಇತ್ತೀಚೆಗೆ ದುಬೈನಲ್ಲಿ ಆತನ ಹುಟ್ಟುಹಬ್ಬವನ್ನು ಆಚರಿಸಿದರು. ಅದರ ಚಿತ್ರಗಳನ್ನು ಶೋಯೆಬ್ ಮಲಿಕ್ ಹಂಚಿಕೊಂಡಿದ್ದರು.

https://twitter.com/AvinashArya09/status/1589240377487556608?ref_src=twsrc%5Etfw%7Ctwcamp%5Etweetembed%7Ctwterm%5E1589240377487556608%7Ctwgr%5E9d288f6a49de6a20c96aa83ca9efe79a4a41af9b%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18english-epaper-newseigh%2Fwheredobrokenheartsgosaniamirzasharescrypticpostamiddivorcerumourswithshoaibmalik-newsid-n439662680%3Fs%3Dauu%3D0x61fbe37283098391ss%3Dwsp

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...