ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು ನೀಡುವ ರುಚಿ ಮಾತ್ರ ಅಮೋಘ. ಹಚ್ಚ ಹಸಿರಾಗಿರುವ ಕೊತ್ತಂಬರಿ ಸೊಪ್ಪಿನ ಔಷಧೀಯ ಗುಣಗಳ ಬಗ್ಗೆ ಕೇಳಿದರೆ ನೀವು ಬೆರಗಾಗೋದು ಖಂಡಿತ.
ಕೊತ್ತಂಬರಿ ಸೊಪ್ಪು ಚರ್ಮದ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನೂ ಹೊಂದಿದೆ. ಜೊತೆಗೆ ಚರ್ಮದ ಮೇಲಿನ ಶೀಲೀಂದ್ರ ಸೋಂಕುಗಳನ್ನೂ ಸಹ ಕೊತ್ತಂಬರಿ ಸೊಪ್ಪು ನಿವಾರಿಸುತ್ತದೆ.
ಮೌತ್ ಅಲ್ಸರ್ ಅಥವಾ ಬಾಯಿಯಲ್ಲಾಗುವ ಉಷ್ಣದ ಗುಳ್ಳೆಗಳನ್ನೂ ಕೊತ್ತಂಬರಿ ಸೊಪ್ಪು ನಿವಾರಿಸುತ್ತದೆ. ಇದರಲ್ಲಿರುವ ನಂಜುನಿರೋಧಕ ಗುಣದಿಂದಾಗಿ ಇದನ್ನು ಟೂತ್ ಪೇಸ್ಟ್ ಗಳಲ್ಲಿಯೂ ಉಪಯೋಗಿಸುತ್ತಾರೆ.
ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಋತುಚಕ್ರ ಕ್ರಮವಾಗಿ ಆಗುತ್ತದೆ. ಅಲ್ಲದೇ ಋತುಚಕ್ರದ ಸಮಯದಲ್ಲಿ ಬರುವ ಕಿಬ್ಬೊಟ್ಟೆ ನೋವನ್ನೂ ಈ ಸೊಪ್ಪು ನಿವಾರಿಸುತ್ತದೆ.
ವಿಟಮಿನ್ ಎ, ಸಿ, ಮಿನರಲ್ಸ್ ಹೇರಳವಾಗಿರುವ ಕೊತ್ತಂಬರಿ ಸೊಪ್ಪು ಕಣ್ಣಿನ ತೊಂದರೆ ಹಾಗೂ ದೃಷ್ಟಿ ದೋಷವನ್ನೂ ಕಡಿಮೆ ಮಾಡುತ್ತದೆ.
ಕೊತ್ತಂಬರಿ ಸೊಪ್ಪು ಜೀರ್ಣಕ್ರಿಯೆಗೂ ಸಹಕಾರಿ. ಅಲ್ಲದೇ ಇದು ನಿದ್ರಾಹೀನತೆ ತಡೆಯುವುದಕ್ಕೂ ಒಳ್ಳೆಯದು.