ದೈನಂದಿನ ವಹಿವಾಟುಗಳಲ್ಲಿ ನೋಟುಗಳನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಹಾಗಾಗಿ ಎಲ್ಲರ ಜೇಬು, ಪರ್ಸ್, ಸೇಫ್ ಮತ್ತು ಬ್ಯಾಂಕ್ ಖಾತೆಗಳಲ್ಲಿ ಗಾಂಧೀಜಿಯಿದ್ದಾರೆ. ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹೇಗೆ ಬಂತು ಎಂಬ ಸಂಗತಿ ಇಂಟ್ರೆಸ್ಟಿಂಗ್ ಆಗಿದೆ.
ಸ್ವಾತಂತ್ರ್ಯದ ನಂತರ ಗಾಂಧೀಜಿಯವರ ಫೋಟೋವನ್ನು ಭಾರತೀಯ ನೋಟುಗಳ ಮೇಲೆ ಮುದ್ರಿಸಲಾಯಿತು. ಭಾರತೀಯ ಕರೆನ್ಸಿ ಕಾಗದದ ಮೇಲೆ ಮುದ್ರಣವಾಗಿದ್ದು ಕೂಡ ಅದೇ ಸಮಯದಲ್ಲಿ. ದೇಶಕ್ಕೆ ಸ್ವಾತಂತ್ರ್ಯ ಬಂದು 22 ವರ್ಷಗಳ ನಂತರ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿಯವರ ಚಿತ್ರ ಕಾಣಿಸಿಕೊಂಡಿತ್ತು, ಅದೂ ಒಂದು ರೂಪಾಯಿ ನೋಟಿನಲ್ಲಿ ಮಾತ್ರ. ಭಾರತೀಯ ರಿಸರ್ವ್ ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ ಭಾರತ ಸರ್ಕಾರ 1949ರಲ್ಲಿ ಒಂದು ರೂಪಾಯಿ ನೋಟಿನ ಹೊಸ ವಿನ್ಯಾಸವನ್ನು ಮೊದಲು ಸಿದ್ಧಪಡಿಸಿತು. ಆಗ ಸ್ವತಂತ್ರ ಭಾರತಕ್ಕೆ ಒಂದು ಚಿಹ್ನೆಯನ್ನು ಆಯ್ಕೆ ಮಾಡಬೇಕಾಗಿತ್ತು.
ಮೊದಮೊದಲು ನೋಟುಗಳಲ್ಲಿ ಬ್ರಿಟನ್ ರಾಜನ ಬದಲು ಮಹಾತ್ಮ ಗಾಂಧೀಜಿ ಅವರ ಚಿತ್ರ ಇರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಒಮ್ಮತವಿಲ್ಲದೇ ಇದ್ದಿದ್ದರಿಂದ ಮಹಾತ್ಮ ಗಾಂಧಿ ಬದಲಿಗೆ ಅಶೋಕ ಸ್ತಂಭದ ಫೋಟೋವನ್ನು ಮುದ್ರಿಸಲು ನಿರ್ಧರಿಸಲಾಯಿತು. ಇದಾದ ನಂತರ 1950 ರಲ್ಲಿ ಭಾರತ ಗಣರಾಜ್ಯವಾದಾಗ ಮೊದಲ ಬಾರಿಗೆ 2, 5, 10 ಮತ್ತು 100 ರೂಪಾಯಿಗಳ ನೋಟುಗಳನ್ನು ಬಿಡುಗಡೆ ಮಾಡಲಾಯಿತು. ಅದರಲ್ಲಿ ಗಾಂಧೀಜಿಯವರ ಫೋಟೋ ಇರಲಿಲ್ಲ.
ದೇಶವು ಸ್ವತಂತ್ರಗೊಂಡು 49 ವರ್ಷಗಳ ನಂತರ ಮಹಾತ್ಮ ಗಾಂಧಿಯವರ ಚಿತ್ರವಿರುವ ನೋಟುಗಳ ಸಂಪೂರ್ಣ ಸರಣಿಯನ್ನು ಬಿಡುಗಡೆ ಮಾಡಲಾಯಿತು. 1969 ರಲ್ಲಿ ಮೊದಲ ಬಾರಿಗೆ, ಮಹಾತ್ಮ ಗಾಂಧಿಯವರ 100ನೇ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ರಿಸರ್ವ್ ಬ್ಯಾಂಕ್ ಅವರ ಫೋಟೋದೊಂದಿಗೆ ಒಂದು ರೂಪಾಯಿ ನೋಟನ್ನು ಬಿಡುಗಡೆ ಮಾಡಿತು. ಅದರಲ್ಲಿ ಮಹಾತ್ಮ ಗಾಂಧೀಜಿ ಕುಳಿತಿರುವ ಚಿತ್ರವಿತ್ತು, ಹಿನ್ನಲೆಯಲ್ಲಿ ಸೇವಾಗ್ರಾಮ ಆಶ್ರಮವಿತ್ತು.
18 ವರ್ಷಗಳ ನಂತರ RBI ಮತ್ತೊಂದು ನೋಟು ಸಿದ್ಧಪಡಿಸಿತು. 1987ರಲ್ಲಿ ಬಿಡುಗಡೆಯಾದ ಈ ನೋಟಿನಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಿಸಲಾಗಿತ್ತು. ಆರ್‌ಬಿಐ ಈ 500 ರೂಪಾಯಿ ನೋಟನ್ನು 1996ರಲ್ಲಿ ಸ್ಥಗಿತಗೊಳಿಸಿತ್ತು. ನಂತರ 1996 ರಲ್ಲಿ ರಿಸರ್ವ್ ಬ್ಯಾಂಕ್ ಗಾಂಧೀಜಿಯವರ ಚಿತ್ರವಿರುವ ಹೊಸ ಸರಣಿಯ ನೋಟುಗಳನ್ನು ಪ್ರಕಟಿಸಿತು.