ನವದೆಹಲಿ: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾರ್ಗದರ್ಶನದಲ್ಲಿ ಕಿಚಡಿ ತಯಾರಿಸಿದ್ದು ಅದರ ವಿಡಿಯೋ ವೈರಲ್ ಆಗಿದೆ.
ಕಿಚಡಿ ಕೂಡ ಭಾರತದ ಪ್ರಮುಖ ಖಾದ್ಯಗಳಲ್ಲಿ ಒಂದಾಗಿದೆ. ಇದೀಗ ಪ್ರಸಿದ್ಧ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಕಿಚಡಿ ತಯಾರಿಸಿ ಅದರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಕಿಚಡಿ ಅಡುಗೆ ಮಾಡುವ ವಿಧಾನವನ್ನು ಕಲಿತರು. ಇದೇ ಸಂದರ್ಭದಲ್ಲಿ ಭಾರತೀಯ ಮಗುವಿಗೆ ಅನ್ನ ಪ್ರಾಶನ ಮಾಡಿಸಿದರು.
ಈ ಸಂದರ್ಭದಲ್ಲಿ ಅವರು ದೇಶದ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿರುವ ಪೋಶನ್ 2.0 ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನಿರ್ವಾಹಕರನ್ನು ಭೇಟಿ ಮಾಡಿದರು. ಈ ವಿಡಿಯೊವನ್ನು ಸ್ವತಃ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಚಿವೆ ಸ್ಮೃತಿ ಇರಾನಿ ಬಾಣಲೆಗೆ ಮೊದಲು ಎಣ್ಣೆ ಹಾಕುತ್ತಾರೆ. ನಂತರ ಬಿಲ್ ಗೇಟ್ಸ್ ಅವರು ಒಗ್ಗರಣೆಯನ್ನು ಹಾಕುವುದನ್ನು ನೋಡಬಹುದು. ನಂತರ ಸ್ಮೃತಿ ಅವರು ಒಂದು ಚಿಕ್ಕ ಬೌಲ್‌ನಲ್ಲಿ ಕಿಚಡಿಯನ್ನು ಹಾಕಿ ಬಿಲ್ ಗೇಟ್ಸ್‌ಗೆ ತಿನ್ನಲು ಕೊಡುತ್ತಾರೆ.
https://twitter.com/KewatSarma/status/1631335651445739522?ref_src=twsrc%5Etfw%7Ctwcamp%5Etweetembed%7Ctwterm%5E1631335651445739522%7Ctwgr%5E029d881a9b39fc48fce9b6613bc4ede45341cd86%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhen-smriti-irani-taught-bill-gates-how-to-add-tadka-to-khichdi-viral-video-2342201-2023-03-03