ಟಾಲಿವುಡ್ ನ ಸ್ಟಾರ್ ಕಪಲ್ ಗಳಲ್ಲಿ ಒಬ್ಬರಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಜೋಡಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದಿತ್ತು. ಪರಸ್ಪರ ಹತ್ತು ವರ್ಷಗಳ ಕಾಲ ಪ್ರೀತಿಸಿದ ಬಳಿಕ, 2017 ರಲ್ಲಿ ಈ ಜೋಡಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.
ಆದರೆ ವಿಧಿಯಾಟ ಮಾತ್ರ ಬೇರೆಯೆ ಇತ್ತು. ಹೋದಾಣಿಕೆಯಾಗದೇ ಇಬ್ಬರು 2021ರಲ್ಲಿ ವಿಚ್ಛೇದನ ಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿದ್ರು. ಇವ್ರ ಈ ನಿರ್ಧಾರದಿಂದ ಅಭಿಮಾನಿಗಳು ಈಗಲೂ ಬೇಸರರಾಗಿದ್ದಾರೆ, ತಮ್ಮ ಫೇವರಿಟ್ ಕಪಲ್ ಮತ್ತೇ ಜೊತೆಯಾಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಂತಾ ನೀಡಿದ ಇಂಟರ್ವ್ಯೂ ಒಂದು ವೈರಲ್ ಆಗ್ತಿದೆ. ವರ್ಷಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಸಮಂತಾ, ನಾಗಚೈತನ್ಯ ಅವ್ರನ್ನ ಹಸ್ಬೆಂಡ್ ಮೆಟಿರಿಯಲ್ ಎಂದು ಕರೆದಿದ್ದಾರೆ.
ತೆಲುಗಿನ ಸ್ಟಾರ್ ನಿರೂಪಕಿ ಲಕ್ಷ್ಮಿ ಮಂಚು ಅವ್ರಿಗೆ ನೀಡಿದ ಸಂದರ್ಶನದಲ್ಲಿ ನಾಗಚೈತನ್ಯ ಹಾಗೂ ತನ್ನ ನಡುವಿನ ಸ್ನೇಹ ಸಂಬಂಧದ ಬಗ್ಗೆ ಮಾತನಾಡಿರುವ ಸಮಂತಾ, ಹಲವು ವಿಷಯಗಳನ್ನ ಹಂಚಿಕೊಂಡಿದ್ದರು. ಯುಎಸ್ ಗೆ ಶೂಟಿಂಗ್ ಹೋದಾಗ ತನ್ನ ತಾಯಿಗೆ ಕರೆ ಮಾಡಲು ನನ್ನತ್ರ ಹಣ ಇರಲಿಲ್ಲ, ಆ ಸಮಯದಲ್ಲಿ ನಾಗಚೈತನ್ಯ ನನಗೆ ಸಹಾಯ ಮಾಡಿದ್ರು. ಉಳಿದವರು ನನ್ನ ಬಗ್ಗೆ, ನಾನು ಚಿತ್ರರಂಗದಲ್ಲಿ ನೆಲೆಯೂರಿದ ಮೇಲೆ ತಿಳಿದ್ಕೊಂಡಿದ್ದಾರೆ. ಆದ್ರೆ ನಾಗಚೈತನ್ಯ ನನ್ನ ಬಳಿ ಏನು ಇಲ್ಲದ ಸಮಯದಿಂದಲು ನನ್ನ ಜೊತೆ ಇದ್ದಾರೆ. ನನ್ನ ತಪ್ಪುಗಳನ್ನು ನೋಡಿದ್ದಾರೆ, ಅವರಲ್ಲದೆ ಬೇರೆ ಇನ್ಯಾರನ್ನ ಆರಿಸಿಕೊಳ್ಳಲಿ. ನಾಗಚೈತನ್ಯ ಹಸ್ಬೆಂಡ್ ಮೆಟಿರಿಯಲ್ ಎಂದಿದ್ದರು.
ಕೆಲ ದಿನಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಿಂದ ತಾವಿಬ್ಬರು ಪ್ರತ್ಯೇಕವಾಗುತ್ತಿದ್ದೇವೆ ಎಂದು ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿದ್ದ ಸಮಂತಾ, ಸಾಕಷ್ಟು ಸುದ್ದಿಯಾಗಿದ್ದರು. ಇದರಿಂದ ಬಹುಶಃ ಈ ಜೋಡಿ ಮತ್ತೆ ಒಂದಾಗತ್ತೆ ಎಂದು ಅಭಿಮಾನಿಗಳು ಕಾತರರಾಗಿದ್ದಂತು ನಿಜ.