ಭಾರತ ಕ್ರಿಕೆಟ್ ತಂಡದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ, ಆಟದಲ್ಲಿರುವ ಕೆಲವೊಂದು ದಾಖಲೆಗಳ ಮೇಲೆ ತಮ್ಮ ಹೆಸರು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಧೋನಿ ಇದೀಗ ತಮ್ಮ ಕುಟುಂಬದೊಂದಿಗೆ ನಿವೃತ್ತ ಜೀವನ ಕಳೆಯುತ್ತಿದ್ದಾರೆ. ಪತ್ನಿ ಸಾಕ್ಷಿಯೊಂದಿಗೆ ಕಳೆದೊಂದು ದಶಕದಿಂದ ಸಂತಸದ ವೈವಾಹಿಕ ಜೀವನ ಸವೆಸಿದ್ದಾರೆ ಧೋನಿ.
ವರ್ಕೌಟ್ ಬಳಿಕ ಕೂಲ್ ಆಗಲು ಮಾಡಿ ಈ ಸಿಂಪಲ್ ಯೋಗ
ಮದುವೆಗೂ ಮುನ್ನ ಧೋನಿ ಆಗಾಗ ಕೆಲವೊಂದು ರಿಲೇಷನ್ಶಿಪ್ಗಳ ಗಾಸಿಪ್ಗೆ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಈ ಸ್ಟಾರ್ ಕ್ರಿಕೆಟರ್ ಒಂದೊಮ್ಮೆ ಮಾಡೆಲ್ ಹಾಗೂ ನಟಿ ಲಕ್ಷ್ಮಿ ರೈ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳು ಹಬ್ಬಿದ್ದವು. 2008-2009ರಲ್ಲಿ ಐಪಿಎಲ್ ಪಾರ್ಟಿಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು ಎಂಬ ವರದಿಗಳು ಬರತೊಡಗಿದ್ದವು. ಲಕ್ಷ್ಮಿ ರೈ ಹುಟ್ಟುಹಬ್ಬದ ಪಾರ್ಟಿಗೆ ತಮ್ಮ ಸ್ನೇಹಿತ ಸುರೇಶ್ ರೈನಾ ಜೊತೆಗೆ ಧೋನಿ ಹಾಜರಾಗುತ್ತಿದ್ದರು.
ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ 2 ಸಾವಿರ ರೂ. ಜಮಾ, ನೋಂದಾಯಿಸದ ಕೃಷಿಕರಿಗೆ ಮಾಹಿತಿ
ತಮ್ಮ ಬ್ರೇಕ್-ಅಪ್ ಬಗ್ಗೆ 2014ರಲ್ಲಿ ಮಾತನಾಡಿದ ಲಕ್ಷ್ಮಿ ರೈ, “ಧೋನಿ ಜೊತೆಗೆ ನನ್ನ ಸಂಬಂಧ ಒಂದು ರೀತಿಯ ಕಲೆ ಇದ್ದಂತೆ ಹಾಗೂ ಅದು ಬಹು ಕಾಲದವರೆಗೂ ಮಾಸುವುದಿಲ್ಲ ಎಂದು ನಂಬಿದ್ದೇನೆ. ನಾವು ಬೇರೆಯಾಗಿ ಐದು ವರ್ಷಗಳಾದರೂ ಸಹ ಜನ ಈ ಬಗ್ಗೆ ಮಾತನಾಡುತ್ತಿರುತ್ತಾರೆ,” ಎಂದು ಹೇಳಿಕೊಂಡಿದ್ದರು.
ಧೋನಿ ಹೊರತುಪಡಿಸಿ ಮಿಕ್ಕ ಯಾರೊಂದಿಗಿನ ಜೊತೆಗೆ ತಮ್ಮ ರೊಮ್ಯಾಂಟಿಕ್ ಸಂಬಂಧ ಅಷ್ಟಾಗಿ ಸುದ್ದಿ ಮಾಡಲಿಲ್ಲ ಎಂದು ರೈ ಹೇಳಿಕೊಂಡಿದ್ದಾರೆ. ಬ್ರೇಕ್ ಅಪ್ ಆದ ಬಳಿಕವೂ ತಮ್ಮಿಬ್ಬರ ನಡುವೆ ಪರಸ್ಪರ ಗೌರವವಿರುವುದಾಗಿ ಹೇಳಿಕೊಂಡಿದ್ದ ರೈ, “ಧೋನಿ ಒಬ್ಬ ಒಳ್ಳೆಯ ವ್ಯಕ್ತಿ. ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಇಷ್ಟ ಪಡುವಂಥ ವ್ಯಕ್ತಿಯಾದ ಧೋನಿ ಒಬ್ಬ ಕರುಣಾಮಯಿ ಹಾಗೂ ಸಮತೋಲಿತ ವ್ಯಕ್ತಿ,” ಎಂದಿದ್ದಾರೆ.