ನಟಿ ಪ್ರಿಯಾಂಕಾ ಚೋಪ್ರಾ ಅವರ 39ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಆಕೆಯ ಕುಟುಂಬ, ಸ್ನೇಹಿತರು ವಿಶೇಷವಾಗಿ ಆಕೆಯ ಪತಿ ನಿಕ್ ಜೋನ್ಸ್ ಮೆರಗುಗೊಳಿಸಿದರು.
ಜುಲೈ 18ರಂದು ಅವರ ಹುಟ್ಟುಹಬ್ಬದ ಆಚರಣೆ ನಡೆಯಿತು. ಆ ರಸಘಳಿಗೆಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನೊಂದು ಸಂಗತಿಯೆಂದರೆ ಆಕೆಯು ತನ್ನ 36ನೇ ಹುಟ್ಟುಹಬ್ಬದ ವಿಶೇಷತೆಯನ್ನು ಈ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಅಂದು ಗ್ರೀಕ್ನ ಕ್ರೀಟ್ನಲ್ಲಿ ಕಳೆದ ರೋಮ್ಯಾಂಟಿಕ್ ವೆಕೇಶನ್ಅನ್ನು ಮೆಲುಕು ಹಾಕಿದ್ದಾರೆ. ನಿಕ್ ಮತ್ತು ಪ್ರಿಯಾಂಕ ನಡುವೆ ಮದುವೆ ಪ್ರಸ್ತಾಪವಾಗಿದ್ದು ಅದೇ ಸಂದರ್ಭದಲ್ಲಿ.
ಫ್ರೀ ಕಾಂಡೊಮ್ ಕೊಟ್ಟು ಮುರಿಯುವ ಮಂಚ ಹಾಕಿದ ಆಯೋಜಕರು
‘ಮೈ ಎವೆರಿಥಿಂಗ್,… ಇಂದಿಗೆ ಮೂರು ವರ್ಷ. ನನ್ನ ಲೈಫ್ ಟೈಮ್ ಮಿನುಗಿದ ದಿನ. ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಆಕೆ ತನ್ನ ಸಖನ ಜತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.
ಈ ಮೊದಲು ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ನಿಕ್ ಕಳುಹಿಸಿದ ಮ್ಯೂಸಿಕ್ ಹಂಚಿಕೊಂಡಿದ್ದರು.
https://www.instagram.com/p/CRhgreht9xL/?utm_source=ig_web_copy_link
https://www.instagram.com/p/CRhCyi3tI4i/?utm_source=ig_web_copy_link