
ನಟಿ ಕತ್ರಿನಾ ಕೈಫ್ ಮತ್ತು ನಟ ರಣಬೀರ್ ಕಪೂರ್ ಅವರ ನಡುವಿನ ಸಂಬಂಧದ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ರಣಬೀರ್ ಕಪೂರ್ ತಾಯಿ ನೀತು ಕಪೂರ್ ಮದುವೆಯ ವಿಷಯದ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಹಂಚಿಕೊಂಡಾಗಿನಿಂದ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕತ್ರೀನಾ ಅವರನ್ನು ನೀತು ಕಪೂರ್ ಕೆಣಕುತ್ತಿದ್ದಾರೆಯೇ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ಈ ನಡುವೆ ರಣಬೀರ್ ಕಪೂರ್ ಜೊತೆಗಿನ ಬ್ರೇಕಪ್ ಬಗ್ಗೆ ಕತ್ರೀನಾ ಮಾತಾಡಿರುವ ಹಳೆಯ ವಿಡಿಯೋ ಮತ್ತೆ ಬೆಳಕಿಗೆ ಬಂದಿದೆ.
ಮಿಡ್ ಡೇಗೆ ನೀಡಿದ ಹಳೆಯ ಸಂದರ್ಶನದಲ್ಲಿ ಕತ್ರಿನಾ, ರಣಬೀರ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಸಂಬಂಧದ ಬಗ್ಗೆ ಮಾತನಾಡಲು ತನ್ನನ್ನು ಒತ್ತಾಯಿಸಲಾಯಿತು. ಏಕೆಂದರೆ ಮಾಧ್ಯಮಗಳು ಅದರಲ್ಲಿ ಆಸಕ್ತಿ ಹೊಂದಿದ್ದವು ಎಂದು ಬಹಿರಂಗಪಡಿಸಿದ್ದಾರೆ.
ಹಾಗಾಗಿ ನಾನು ಬಯಸಿದ ಕನಿಷ್ಠ ವಿಷಯವನ್ನು ಹಂಚಿಕೊಳ್ಳುವುದು ಮತ್ತು ವಾಸ್ತವವನ್ನು ಒಪ್ಪಿಕೊಳ್ಳುವಷ್ಟು ಪ್ರಾಮಾಣಿಕವಾಗಿರುವುದು ಉತ್ತಮ ವಿಷಯವಾಗಿದೆ. ನಾವು (ಕಪೂರ್ ಮತ್ತು ಕತ್ರೀನಾ) ಇನ್ನೂ ಪರಸ್ಪರ ಗೌರವವನ್ನು ಹೊಂದಿದ್ದೇವೆ ಮತ್ತು ಅದು ಬದಲಾಗುವುದಿಲ್ಲ ಎಂದು ಕತ್ರೀನಾ 2019 ರಲ್ಲಿ ಹೇಳಿದ್ದಾರೆ.
ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ 2009 ರಿಂದ 2016 ರ ವರೆಗೆ ಸುಮಾರು ಏಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು. ನಂತರ ರಣಬೀರ್ ಕುಟುಂಬವು ಕತ್ರಿನಾರನ್ನು ಹೆಚ್ಚು ಇಷ್ಟಪಡಲಿಲ್ಲ ಎಂದು ವರದಿಯಾಗಿದೆ. ರಣಬೀರ್ ಕಪೂರ್ ಏಪ್ರಿಲ್ 2022 ರಲ್ಲಿ ಆಲಿಯಾ ಭಟ್ ಅವರೊಂದಿಗೆ ಮದುವೆಯಾದರೆ, ಕತ್ರಿನಾ ಈಗ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿದ್ದಾರೆ.
ಏತನ್ಮಧ್ಯೆ ನೀತು ಸಿಂಗ್ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದರು. “ಅವನು ನಿನ್ನನ್ನು 7 ವರ್ಷಗಳ ಕಾಲ ಡೇಟಿಂಗ್ ಮಾಡಿದ ಮಾತ್ರಕ್ಕೆ, ಅವನು ನಿನ್ನನ್ನು ಮದುವೆಯಾಗುತ್ತಾನೆ ಎಂದರ್ಥವಲ್ಲ. ನನ್ನ ಚಿಕ್ಕಪ್ಪ 6 ವರ್ಷ ವೈದ್ಯಕೀಯ ಅಧ್ಯಯನ ಮಾಡಿದರು. ಈಗ ಅವರು ಡಿಜೆ.” ಎಂದಿದ್ದರು. ಕತ್ರಿನಾ ಕೈಫ್ ರನ್ನು ಪರೋಕ್ಷವಾಗಿ ನೀತು ಕಪೂರ್ ಟೀಕಿಸಿದ್ದಾರೆ ಎಂದು ನೆಟ್ಟಿಗರು ಭಾವಿಸಿದ್ದಾರೆ.