alex Certify ಬಯಲಾಯ್ತು ರೈಲಿನಲ್ಲಿ ಒಳ ಉಡುಪಿನಲ್ಲೇ ಅಡ್ಡಾಡಿದ್ದ ಶಾಸಕನ ಬಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ರೈಲಿನಲ್ಲಿ ಒಳ ಉಡುಪಿನಲ್ಲೇ ಅಡ್ಡಾಡಿದ್ದ ಶಾಸಕನ ಬಣ್ಣ

ಜೆಡಿ(ಯು) ಪಕ್ಷದ ಸಂಸದ ಅಜಯ್​ ಮಂಡಲ್​ ರೈಲಿನಲ್ಲಿ ಅಂಡರ್​ವೇರ್​ನಲ್ಲಿ ತಿರುಗಿದ ಸಂಸದ ಗೋಪಾಲ್ ಮಂಡಲ್​ ವರ್ತನೆ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಸೆಪ್ಟೆಂಬರ್​ 2ರಂದು ಪಾಟ್ನಾ – ದೆಹಲಿ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್​​ನಲ್ಲಿ ಅವರು ಒಳ ಉಡುಪಿನಲ್ಲಿ ಓಡಾಡಿದ್ದರು.

ಈ ವಿಚಾರವಾಗಿ ಮಾತನಾಡಿದ ಅಜಯ್​ ಮಂಡಲ್​, ಗೋಪಾಲ್​ ಮಂಡಲ್​ ನಿಜಕ್ಕೂ ಒಬ್ಬ ಒಳ್ಳೆಯ ಮನುಷ್ಯ. ಆದರೆ ಮದ್ಯಪಾನ ಸೇವನೆ ಮಾಡಿದರೆ ಮಾತ್ರ ಅವರಿಗೆ ಕಂಟ್ರೋಲ್​ ಇರೋದೇ ಇಲ್ಲ ಎಂದು ಹೇಳಿದ್ದಾರೆ.

ಗೋಪಾಲ್​ ಮಂಡಲ್​ ನಮ್ಮದೇ ಪಕ್ಷದ ಶಾಸಕ. ಅವರು ಸಾಮಾನ್ಯವಾಗಿ ಯಾವುದೇ ತಪ್ಪನ್ನು ಮಾಡೋದಿಲ್ಲ. ಆದರೆ ಮದ್ಯಪಾನ ಸೇವನೆ ಮಾಡಿದರೆ ಮಾತ್ರ ಅವರಿಗೆ ನಿಯಂತ್ರಣವೇ ಇರೋದಿಲ್ಲ ಎಂದು ಅಜಯ್​ ಹೇಳಿದ್ದಾರೆ.

ನಾವೆಲ್ಲ ಜನ ಪ್ರತಿನಿಧಿಗಳು ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿ ವರ್ತಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಆದರೆ ಸೆಪ್ಟೆಂಬರ್​ 2ರಂದು ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್​ನಲ್ಲಿ ಗೋಪಾಲ್​​ ವರ್ತಿಸಿದ ರೀತಿ ಕ್ಷಮಿಸಲು ಸಾಧ್ಯವಿಲ್ಲ. ಇದು ನಿಜಕ್ಕೂ ಖಂಡನಾರ್ಹ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...