
ಬೇಸಿಗೆ ಋತು ಬಹುತೇಕ ಕಾಲಿಟ್ಟಾಗಿದೆ. ಹೆಚ್ಚು ನೀರು ಕುಡಿಯುವುದು ಎಷ್ಟು ಮುಖ್ಯವೋ ತಾಜಾ ತರಕಾರಿಗಳ ಸೇವನೆಯೂ ಅಷ್ಟೇ ಮುಖ್ಯ. ಅವುಗಳಲ್ಲಿ ಸೌತೆಕಾಯಿಯೂ ಒಂದು.
ಸೌತೆಕಾಯಿಯನ್ನು ರಾತ್ರಿ ಹೊತ್ತಲ್ಲಿ ಸೇವಿಸುವುದು ಒಳ್ಳೆಯದಲ್ಲ ಎನ್ನುತ್ತವೆ ಸಂಶೋಧನೆಗಳು. ರಾತ್ರಿ ಮುಳ್ಳುಸೌತೆಯನ್ನು ಸೇವಿಸುವುದರಿಂದ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಇದು ನಿಮ್ಮ ನಿದ್ದೆಯನ್ನು ಹಾಳು ಮಾಡಬಹುದು. ಹಿರಿಯ ವಯಸ್ಕರಿಗೆ ಅದರಲ್ಲೂ ನಿದ್ರಾಹೀನತೆ ಇರುವವರು ಇದರಿಂದ ದೂರವಿರುವುದೇ ಒಳ್ಳೆಯದು.
ಮುಳ್ಳುಸೌತೆ ಹೆಚ್ಚು ತಿಂದರೆ ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ. ಸೈನಸ್ ಸಮಸ್ಯೆ ಇರುವವರು ಸೌತೆಕಾಯಿಯಿಂದ ದೂರವಿರುವುದು ಒಳ್ಳೆಯದು. ಬಹುಬೇಗ ಶೀತವಾಗುವಂತಿದ್ದರೆ, ಉಸಿರಾಟದ ಸಮಸ್ಯೆ ಇದ್ದರೆ ನೀವು ಇದನ್ನು ತಿನ್ನದಿರುವುದು ಒಳ್ಳೆಯದು.
ಒಣಕೆಮ್ಮು, ಗಂಟಲು ನೋವು ಸಮಸ್ಯೆ ಇರುವವರು ಇದನ್ನು ಹಸಿಯಾಗಿ ತಿನ್ನುವಾಗ ಚಿಟಿಕೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿಕೊಳ್ಳಿ. ಇದರಿಂದ ಶೀತದ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ರಾತ್ರಿ ವೇಳೆ ಸೇವಿಸುವುದನ್ನು ಕಡ್ಡಾಯವಾಗಿ ತಪ್ಪಿಸಿ.