ಚಂದ್ರನನ್ನು ಹಳದಿ ಬಣ್ಣದ ಸಂಚಾರಿ ಸಿಗ್ನಲ್ ದೀಪವೆಂದು ತಪ್ಪಾಗಿ ಅರ್ಥೈಸಿಕೊಂಡ ಟೆಸ್ಲಾ ಕಾರಿನ ಆಟೋಪೈಲಟ್ ಫೀಚರ್‌ನ ವಿಡಿಯೋವೊಂದನ್ನು ಜೋರ್ಡನ್ ನೆಲ್ಸನ್ ಹೆಸರಿನ ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ಬಹಳ ಜನಪ್ರಿಯವಾಗಿರುವ ಟೆಸ್ಲಾ ಕಾರಿನ ಪೂರ್ಣ ಸ್ವಯಂ ಚಾಲಿತ ವ್ಯವಸ್ಥೆಯ ಆಟೋಪೈಲಟ್ ಸಿಸ್ಟಂನಲ್ಲಿ ಹೀಗೊಂದು ತಾಂತ್ರಿಕ ಸವಾಲು ಕಾಣಿಸಿಕೊಂಡಿದೆ.
ಮತದಾರರ ಗುರುತಿನ ಚೀಟಿ ಕಳೆದಿದ್ಯಾ….? ಚಿಂತೆ ಬೇಡ ಸುಲಭವಾಗಿ ಪಡೆಯಲು ಇಲ್ಲಿದೆ ಮಾಹಿತಿ
“ಹೇ, ಎಲಾನ್ ಮಸ್ಕ್, ಆಟೋಪೈಲಟ್ ವ್ಯವಸ್ಥೆಗೆ ಚಂದ್ರ ಸವಾಲೊಡ್ಡುತ್ತಿರುವುದರ ಮೇಲೆ ನಿಮ್ಮ ತಂಡ ಕೆಲಸ ಮಾಡಬೇಕಿದೆ. ಚಂದ್ರನನ್ನು ಸಂಚಾರಿ ಸಿಗ್ನಲ್‌ನ ಹಳದಿ ದೀಪ ಎಂದುಕೊಂಡಿರುವ ಕಾರು ನಿಧಾನವಾಗುತ್ತಾ ಸಾಗಿದೆ” ಎಂದು ಜೋರ್ಡನ್ ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.