ಕುಸಿದ ಕಟ್ಟಡವೊಂದರ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ವ್ಯಕ್ತಿಯೊಬ್ಬರ ಬಗ್ಗೆಯ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2014ರಲ್ಲಿ ಜರುಗಿದ ಈ ಘಟನೆಯಲ್ಲಿ ಚೆನ್ನೈನಲ್ಲಿ 12 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು, ಘಟನೆ ನಡೆದು 64 ಗಂಟೆಗಳ ಬಳಿಕ ಕಾಂಕ್ರೀಟ್ ಸ್ಲ್ಯಾಬ್ ಒಂದರ ಬಳಿ ಪೊಲೀಸ್ ನಾಯಿಯೊಂದು ನಿಂತು ಬೊಗಳುವ ಮೂಲಕ ರಕ್ಷಣಾ ಸಿಬ್ಬಂದಿಗೆ ಅಲ್ಲೊಬ್ಬರು ಸಂತ್ರಸ್ತರು ಸಿಲುಕಿರುವ ವಿಷಯದ ಬಗ್ಗೆ ಅಲರ್ಟ್ ಮಾಡಿದೆ.
ಇದಾದ ಎಂಟು ಗಂಟೆಗಳ ಬಳಿಕ ಹಳದಿ ಟೀ-ಶರ್ಟ್ ಧರಿಸಿದ ವಿಕಾಸ್ ಕುಮಾರ್ ಹೆಸರಿನ ವ್ಯಕ್ತಿಯೊಬ್ಬರು ಅವಶೇಷಗಳಡಿಯಿಂದ ಹೊರಗೆ ಬಂದಿದ್ದಾರೆ.
ಎಡವಿ ಬೀಳುವುದನ್ನು ತಪ್ಪಿಸಲು ಚಪ್ಪಲಿಯೇ ನಿಷೇಧ…!
ಹೀಗೆ ಬಚಾವಾಗಿ ಹೊರಬರುತ್ತಲೇ ತನ್ನ ಸುತ್ತಲೂ ಏನನ್ನೋ ಹುಡುಕುವವನಂತೆ ಕಂಡ ವಿಕಾಸ್, “ನನ್ನ ಚಪ್ಪಲಿಗಳೆಲ್ಲಿ ?” ಎಂದಿದ್ದಾನೆ. ಹೀಗೆ 72 ಗಂಟೆಗಳ ಬಳಿಕ ಮೇಲೆದ್ದು ಬಂದ ಕೂಡಲೇ ಈತನ ಮೊದಲ ಆದ್ಯತೆ ಚಪ್ಪಲಿ ಎಂದು ಗೊತ್ತಾದ ಬಳಿಕ ನೆಟ್ಟಿಗರು ಭಾರೀ ಅಚ್ಚರಿಗೀಡಾಗಿದ್ದಾರೆ.
“ಮಹಿಳೆಯರೇ: ಪುರುಷರು ತಮ್ಮ ವಸ್ತುಗಳ ಬಗ್ಗೆ ಬಹಳ ಅಸಡ್ಡೆ ಮಾಡುತ್ತಾರೆ ಎನ್ನುತ್ತೀರಿ” ಎಂದು ಈ ಪೋಸ್ಟ್‌ಗೆ ಕ್ಯಾಪ್ಷನ್ ಕೊಡಲಾಗಿದೆ.