
ಅದಾಗ್ಯೂ ಅವರ ತಂದೆ ಮತ್ತು ಹೆಸರಾಂತ ಚಿತ್ರಕಥೆಗಾರ ಸಲೀಂ ಖಾನ್ ಯಾವಾಗಲೂ ತಮ್ಮ ಮಗನನ್ನು ರಕ್ಷಿಸುತ್ತಾರೆ. ಸಲ್ಲು ವಿವಾದದಲ್ಲಿ ಸಿಲುಕಿಕೊಂಡಾಗ , ತೀವ್ರ ಟೀಕೆಗೆ ಗುರಿಯಾದಾಗಲೆಲ್ಲಾ ತನ್ನ ಮಗನ ತಪ್ಪುಗಳನ್ನು ಅರ್ಥ ಮಾಡಿಸಿ ಅವರಿಂದ ಕ್ಷಮೆ ಕೇಳಿಸುತ್ತಾರೆ.
ಒಮ್ಮೆ ಜೂಮ್‌ನೊಂದಿಗಿನ ಹಳೆಯ ಸಂದರ್ಶನದಲ್ಲಿ ಸಲೀಂ ಖಾನ್ ಅವರು ತಮ್ಮ ಮಗ ಸಲ್ಮಾನ್ ಖಾನ್ ನಿರ್ದೇಶಕ ಸುಭಾಷ್ ಘಾಯ್ ಅವರೊಂದಿಗೆ ಪಾರ್ಟಿಯಲ್ಲಿ ಜಗಳವಾಡಿದ ಘಟನೆಯನ್ನು ನೆನಪಿಸಿಕೊಂಡರು. ಸಲ್ಮಾನ್ ಖಾನ್, ಸುಭಾಷ್‌ಗೆ ಕಪಾಳಮೋಕ್ಷ ಮಾಡಿದಾಗ, ಕ್ಷಮೆಯಾಚಿಸುವಂತೆ ಮಗನಿಗೆ ಸೂಚಿಸಿದ್ದನ್ನ ಬಹಿರಂಗಪಡಿಸಿದರು. ಅತಿಯಾಗಿ ಮದ್ಯ ಸೇವಿಸಿದ್ದ ವೇಳೆ ಜಗಳ ನಡೆದಿದ್ದಾಗಿ ಮತ್ತು ಅದಕ್ಕೆ ಸಲ್ಮಾನ್ ಖಾನ್ ವಿಷಾದಿಸಿದ್ದ ಎಂದು ಅವರ ತಂದೆ ಹೇಳಿದ್ದರು.
“ಜಗಳದ ನಂತರ, ಮರುದಿನ ಬೆಳಗ್ಗೆ ನಾನು ಚಹಾ ಕುಡಿಯುತ್ತಿದ್ದಾಗ, ಅವನು ( ಸಲ್ಮಾನ್ ಖಾನ್ ) ನನ್ನ ಬಳಿಗೆ ಬಂದು ಘಟನೆಯ ಬಗ್ಗೆ ಹೇಳಿದನು. ಅದು ನಿನ್ನ ತಪ್ಪೆಂದು ಅರಿತುಕೊಂಡಿರುವೆಯಾ ಎಂದು ಅವನನ್ನು ಪ್ರಶ್ನಿಸಿದಾಗ, ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಮದ್ಯಪಾನ ಮಾಡಿದ್ದರಿಂದ ಹೀಗಾಯಿತು ಎಂದು ದೂಷಿಸಿದನು. ಆಗ ನಾನು ಕಾಲ್ ಪಿಕ್ ಮಾಡಿ ಸುಭಾಷ್ ಗೆ ಕ್ಷಮೆ ಕೇಳುವಂತೆ ಸಲಹೆ ನೀಡಿದ್ದೆ” ಎಂದಿದ್ದರು.
ಇದಲ್ಲದೆ 2002 ರಲ್ಲಿ ಪ್ರಕಟವಾದ ಲೆಹ್ರೆನ್‌ನಲ್ಲಿನ ಹಳೆಯ ವರದಿಯಲ್ಲಿ, ಸಲ್ಮಾನ್ ಖಾನ್ ಪಾರ್ಟಿಯೊಂದರಲ್ಲಿ ಸುಭಾಷ್ ಘಾಯ್‌ಗೆ ಕಪಾಳಮೋಕ್ಷ ಮಾಡಿದ್ದನ್ನು ಒಪ್ಪಿಕೊಂಡು ಮರುದಿನ ಕ್ಷಮೆಯಾಚಿಸಿದ್ದನ್ನ ಬಹಿರಂಗಪಡಿಸಿದ್ದರು. ಘಟನೆಯನ್ನು ವಿವರಿಸುತ್ತಾ, ಸುಭಾಷ್ ಘಾಯ್, ಸಲ್ಮಾನ್ ಖಾನ್ ಗೆ ಚಮಚದಿಂದ ಹೊಡೆದು ಮುಖದ ಮೇಲೆ ತಟ್ಟೆಯಿಂದ ಹಲ್ಲೆ ಮಾಡಿ ಅವರ ಬೂಟುಗಳ ಮೇಲೆ ಮೂತ್ರ ವಿಸರ್ಜಿಸಿ ಅವರ ಕುತ್ತಿಗೆ ಹಿಡಿದು ಎಳೆದಾಡಿದ್ದರಂತೆ. ಇದೆಲ್ಲರಿಂದ ತಾವು ತಾಳ್ಮೆ ಕಳೆದುಕೊಳ್ಳುವಂತಾಯಿತು ಎಂದು ಸಲ್ಮಾನ್ ಖಾನ್ ಸ್ಮರಿಸಿದ್ದರು.
ನಂತರ ಸಲ್ಮಾನ್ ಖಾನ್ ಅವರೊಂದಿಗೆ ಯುವರಾಜ್ ಚಿತ್ರ ಮಾಡಿದ ಸುಭಾಷ್ ಘಾಯ್ ಕೂಡ ಒಮ್ಮೆ ಸಲ್ಲು ಜೊತೆ ನಡೆದ ಜಗಳದ ಬಗ್ಗೆ ಮಾತನಾಡಿದ್ದರು. ಜಗಳದ ಮರುದಿನ ಸಲ್ಮಾನ್, ಅವರನ್ನು ಭೇಟಿ ಮಾಡಿ ತಪ್ಪಿತಸ್ಥ ಮಗುವಿನಂತೆ ವರ್ತಿಸಿದ್ದಾಗಿ ಸ್ಮರಿಸಿದ್ದರು. ಅವರ ತಂದೆ ಸಲೀಂ ಖಾನ್ ಅವರು ಕ್ಷಮೆಯಾಚಿಸುವಂತೆ ಕೇಳಿಕೊಂಡಿದ್ದಕ್ಕಾಗಿ ಸಲ್ಮಾನ್ ಖಾನ್ ತಮ್ಮ ಬಳಿ ಬಂದು ಕ್ಷಮೆ ಕೇಳಿದ್ದಾಗಿ ಹೇಳಿದ್ದರು.
“ಸಲ್ಮಾನ್ ತಪ್ಪಿತಸ್ಥ ಮಗುವಿನಂತೆ ನನ್ನ ಮುಂದೆ ಬಂದು ನಿಂತರು, ನಾನು ಮುಗುಳ್ನಕ್ಕು “ನಿನ್ನೆ ರಾತ್ರಿ ಏನಾಯಿತು?” ಎಂದು ಕೇಳಿದೆ. ಆಗ ಅವನು, ‘ನನ್ನ ತಂದೆ ಹೇಳಿದ್ದರಿಂದ ನಾನು ಇಲ್ಲಿಗೆ ಬಂದಿದ್ದೇನೆ’ ಎಂದ. ನಾನು, ‘ಹಾಗಾದರೆ ನೀನು ಕ್ಷಮಿಸಲ್ಲವೇ?’ ಎಂದಾಗ ಅವನು, ‘ಖಂಡಿತವಾಗಿಯೂ ‘ ಎಂದು ಉತ್ತರಿಸಿದ ಎಂದಿದ್ದರು. ಹೀಗಾಗಿ ನಾವು ಜಗಳ ಮರೆತು ಒಂದಾದೆವು ಎಂದಿದ್ದರು.