alex Certify OMG : ಆಟೋ ಮೇಲೆ ದರ್ಶನ್ ಖೈದಿ ನಂ. ಹಾಕಿಕೊಂಡು ವ್ಹೀಲಿಂಗ್, ಫ್ಯಾನ್ಸ್ ಹುಚ್ಚಾಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG : ಆಟೋ ಮೇಲೆ ದರ್ಶನ್ ಖೈದಿ ನಂ. ಹಾಕಿಕೊಂಡು ವ್ಹೀಲಿಂಗ್, ಫ್ಯಾನ್ಸ್ ಹುಚ್ಚಾಟ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದರೂ ಕೂಡ ಅವರ ಜನಪ್ರಿಯತೆ ಇನ್ನೂ ಕಡಿಮೆಯಾಗಿಲ್ಲ.

ಜೈಲಿನಲ್ಲಿ ನಟ ದರ್ಶನ್ ಗೆ ಕೊಟ್ಟ ಕೈದಿ ನಂಬರ್ ನ್ನು ಮೊಬೈಲ್, ಬೈ‍ಕ್ ಹಾಗೂ ತಮ್ಮ ವಾಹನಗಳಲ್ಲಿ ಹಾಕಿಕೊಂಡು ತಮ್ಮ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಆದರೆ ಇಲ್ಲೋರ್ವ ಹುಚ್ಚು ಅಭಿಮಾನಿ ಆಟೋ ಮೇಲೆ ದರ್ಶನ್ ಖೈದಿ ನಂಬರ್ ಹಾಕಿಕೊಂಡು ವೀಲ್ಹಿಂಗ್ ಮಾಡಿ ಪೊಲೀಸರಿಗೆ ವಾಂಟೆಡ್ ಅತಿಥಿಯಾಗಿದ್ದಾನೆ.

ಹೌದು. ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ರೂ ಅಭಿಮಾನಿಗಳ ಹುಚ್ಚಾಟ ಇನ್ನೂ ನಿಂತಿಲ್ಲ. ಅಮಾಯಕರ ಪ್ರಾಣಕ್ಕೆ ಕುತ್ತು ಬರುವ ಹಾಗೆ ಆಟೋ ಮೇಲೆ ದರ್ಶನ್ ಖೈದಿ ನಂಬರ್ ಹಾಕಿಕೊಂಡು ಚಾಲಕನೊಬ್ಬ ನಡು ರಸ್ತೆಯಲ್ಲೇ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾನೆ.

ಈ ವಿಡಿಯೋವನ್ನ ಜಗ್ಗ ಬಾಸ್ ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಕೂಡಲೇ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...