ಕ್ರೀಡಾ ತಾರೆಯರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಅಭಿಮಾನಿಗಳಿಗೆ ಅವರೇ ಸೂಪರ್ ಸ್ಟಾರ್‌ಗಳಾದರೆ, ಕೆಲವರಿಗೆ ಸೂಪರ್ ಹೀರೋಗಳು. ಟೆನಿಸ್, ಸಾಕರ್, ಕ್ರಿಕೆಟ್ ಮತ್ತು ಬ್ಯಾಸ್ಕೆಟ್‌ಬಾಲ್‌ನಂತಹ ವಿವಿಧ ಆಟಗಳ ಅನೇಕ ಜನಪ್ರಿಯ ಆಟಗಾರರು ಪ್ರೇಕ್ಷಕರೊಂದಿಗೆ ನಿಯಮಿತವಾಗಿ ವೈಯಕ್ತಿಕವಾಗಿ ಸಂವಹನ ನಡೆಸುತ್ತಾರೆ. ಇದೇನೂ ಹೊಸತಲ್ಲ. ಆದರೆ ಭಾವುಕ ಎನ್ನುವಂಥ ವಿಡಿಯೋ ಒಂದು ಈಗ ವೈರಲ್ ಆಗಿದ್ದು, ಇದು ನೆಟ್ಟಿಗರ ಮನ ಗೆದ್ದಿದೆ.
ವಿಡಿಯೋದಲ್ಲಿ ಗಾಲಿಕುರ್ಚಿಯಲ್ಲಿರುವ ಚಿಕ್ಕ ಮಗುವನ್ನು ನೋಡಬಹುದು. ಈತ ಆಮ್ಲಜನಕದ ಬೆಂಬಲದಲ್ಲಿದ್ದಾನೆ. ಈತ ಬಾಸ್ಕೆಟ್ಬಾಲ್ ಪ್ರಿಯ. ಇದನ್ನು ಅರಿತ ಖ್ಯಾತ ಬ್ಯಾಸ್ಕೆಟ್‌ಬಾಲ್ ಆಟಗಾರನೊಬ್ಬ ಮಗುವನ್ನು ರಂಜಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದ್ದು, ಇದು ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ.
ಮಗುವಿನ ಮುಖದಲ್ಲಿ ನಗು ತರಿಸಲು ಆಟಗಾರ ಪ್ರಯತ್ನಿಸಿದ್ದಾನೆ. ಈ ಆಟಗಾರ ತನ್ನ ತೋರು ಬೆರಳಿನ ಮೇಲೆ ಚೆಂಡನ್ನು ಇಟ್ಟು ತಿರುಗಿಸುತ್ತಾನೆ. ಅದು ಗರಗರನೆ ತಿರುಗುತ್ತದೆ. ನಂತರ ಆ ಮಗುವಿನ ಬೆರಳನ್ನು ಮೇಲಕ್ಕೆ ಎತ್ತುವಂತೆ ಹೇಳುತ್ತಾನೆ ಆಟಗಾರ. ಕೊನೆಗೆ ಆ ಬಾಲಕನ ಬೆರಳಿಗೆ ತಿರುಗುವ ಬಾಲ್ ಇಡುತ್ತಾನೆ. ಆ ಬಾಲ್ ತಿರುಗುತ್ತಲೇ ಇರುತ್ತದೆ.
ಇದನ್ನು ನೋಡಿದ ಬಾಲಕನ ಖುಷಿಗೆ ಪಾರವೇ ಇಲ್ಲ. ಆತನ ಮುಖದಲ್ಲಿನ ನಗುವನ್ನು ನೋಡಿದರೆ ಎಂಥವರೂ ಭಾವುಕರಾಗುತ್ತಾರೆ. ಇದರ ವಿಡಿಯೋ ನೋಡಿ ಸಹಸ್ರಾರು ಮಂದಿ ವಿವಿಧ ರೀತಿಯ ಕಮೆಂಟ್ ಹಾಕಿದ್ದಾರೆ. ಆಟಗಾರನ ಪ್ರಯತ್ನಕ್ಕೆ ಹ್ಯಾಟ್ಸ್ಆಫ್ ಎಂದಿದ್ದಾರೆ.
https://twitter.com/ViralPosts5/status/1623699787727142913?ref_src=twsrc%5Etfw%7Ctwcamp%5Etweetembed%7Ctwterm%5E1623699787727142913%7Ctwgr%5E6a3cfd3bb9352ee32ba9b6cccd991df7fbdc7a82%7Ctwcon%5Es1_&ref_url=https%3A%2F%2Fwww.india.com%2Fviral%2Fwheelchair-bound-child-on-oxygen-support-has-his-dream-come-true-thanks-to-basketball-star-watch-viral-video-5899213%2F