ಬಳಕೆದಾರರು ಒಂದು ಚಾಟ್‌ನಿಂದ ಇನ್ನೊಂದಕ್ಕೆ ಬದಲಾಯಿಸಿದಾಗಲೂ ಧ್ವನಿ ಸಂದೇಶಗಳನ್ನು ಪ್ಲೇ ಮಾಡಲು ಸಾಧ್ಯವಾಗಿಸುವ ಫೀಚರ್ ಅನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ. ‘ಗ್ಲೋಬಲ್ ವಾಯ್ಸ್ ನೋಟ್ ಪ್ಲೇಯರ್’ ಎಂಬ ಫೀಚರ್ ಅಭಿವೃದ್ಧಿಯಾಗಿದ್ದು ಹಿನ್ನಲೆಯಲ್ಲಿ ಧ್ವನಿ ಸಂದೇಶಗಳನ್ನು ಪ್ಲೇ ಮಾಡುತ್ತದೆ, ಬಳಕೆದಾರರು ಮತ್ತೊಂದು ಸ್ಕ್ರೀನ್ ಗೆ ಹೋಗಿ ವಿಡಿಯೋವನ್ನು ಪ್ಲೇ ಮಾಡಿದಾಗಲು ಅಥವಾ ಇನ್ನೊಂದು ಚಾಟ್ ವಿಂಡೋಗೆ ಹೋದರೂ ಆಡಿಯೋ ಮೆಸೇಜ್ ಅನ್ನು ಕೇಳಿಸಿಕೊಳ್ಳಬಹುದು.
ವರದಿಗಳ ಪ್ರಕಾರ, ಗ್ಲೋಬಲ್ ವಾಯ್ಸ್ ನೋಟ್ ಪ್ಲೇಯರ್ ಫೀಚರ್ ನಿಂದ, ಚಾಟ್ ಬಿಟ್ಟಾಗಲೂ ಧ್ವನಿ ಸಂದೇಶವನ್ನು ಕೇಳಬಹುದು. ಸದ್ಯ ಇರುವ ವಾಯ್ಸ್ ಮೆಸೇಜ್ ಫೀಚರ್ ನಲ್ಲಿ ಸಂದೇಶ ಬಂದ ಚಾಟ್ ನಲ್ಲಿ ಮಾತ್ರ ಧ್ವನಿಯನ್ನ ಕೇಳಿಸಿಕೊಳ್ಳಬಹುದು. ಆದರೆ ಈ ಫೀಚರ್ ಬಳಕೆದಾರರು ಚಾಟ್‌ಗಳ ನಡುವೆ ಬದಲಾಯಿಸಿದಾಗ ಅಥವಾ ಹೋಮ್ ಸ್ಕ್ರೀನ್‌ನಲ್ಲಿದ್ದರೂ ಸಹ ಧ್ವನಿ ಸಂದೇಶವನ್ನು ಕೇಳಲು ಅನುವು ಮಾಡಿಕೊಡುತ್ತದೆ.
ಬದಲಾವಣೆಗಳ ಭಾಗವಾಗಿ, ಬಳಕೆದಾರರು ಧ್ವನಿ ಸಂದೇಶವು ಆ್ಯಪ್ ನ ಮೇಲ್ಭಾಗದಲ್ಲಿ ಪಿನ್ ಆಗಲಿದೆ. ಬಳಕೆದಾರರು ಆ್ಯಪನ್ನು ಬಳಸುತ್ತಿರುವಾಗ ಸಂದೇಶವನ್ನು ಆಲಿಸುವುದನ್ನು ಮುಂದುವರಿಸಬಹುದು ಅಥವಾ ಬೇರೆ ಆ್ಯಪ್ ಬಳಸುವಾಗಲು ಸಂದೇಶವನ್ನ ಕೇಳಬಹುದು. ಆಡಿಯೋ ರೆಕಾರ್ಡಿಂಗ್ ಅನ್ನು ಕೇಳುವುದನ್ನು ಮುಂದುವರಿಸಿದಾಗ ಅದರ ಟ್ರ್ಯಾಕ್ ಅನ್ನು ಇರಿಸಿಕೊಳ್ಳಲು ಪ್ರೋಗ್ರೆಸ್ ಬಾರ್ ಇದೆ. ಈ ಬಾರ್ ಮೂಲಕ, ಪಾಸ್, ಪ್ಲೇ, ಡಿಸ್ಮಿಸ್ ಮಾಡಬಹುದು.
ಗ್ಲೋಬಲ್ ವಾಯ್ಸ್ ನೋಟ್ ಪ್ಲೇಯರ್ ಫೀಚರ್ ಅನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೊದಲು ಬಳಕೆಗೆ ತರಲಾಯ್ತು. ಆ ಸಮಯದಲ್ಲಿ, iOS ಆಧಾರಿತ ಅಪ್ಲಿಕೇಶನ್‌ಗಾಗಿ ಇದನ್ನು ಅಭಿವೃದ್ಧಿಪಡಿಸಲಾಯಿತು. ಈಗ, WABetaInfo ವೈಶಿಷ್ಟ್ಯವು ಆಂಡ್ರಾಯ್ಡ್ ಬಳಕೆದಾರರಿಗಾಗಿ ಅಭಿವೃದ್ಧಿಯಲ್ಲಿದೆ ಎಂದು ಗುರುತಿಸಿದೆ. ಇದಲ್ಲದೆ, ಕಂಪನಿಯು ಈ ಕಾರ್ಯವನ್ನು iOS ನಲ್ಲಿ ಬೀಟಾ ಯೂಸರ್ಸ್ ಗೆ ಹೊರತರಲು ಪ್ರಾರಂಭಿಸಿದೆ. ಆದ್ದರಿಂದ, ನೀವು ವಾಟ್ಸಾಪ್ ನ ಬೀಟಾ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ ಮತ್ತು ನೀವು ಮೂಲ ಚಾಟ್ ವಿಂಡೋದಿಂದ ಹೊರಬಂದ ನಂತರವೂ ನೀವು ಧ್ವನಿ ಸಂದೇಶವನ್ನು ಕೇಳಲು ಸಾಧ್ಯವಾದರೆ, ನೀವು ಈ ವೈಶಿಷ್ಟ್ಯವನ್ನು ಪಡೆದುಕೊಂಡಿದ್ದೀರಿ ಎಂದರ್ಥ.