ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾದ ವಾಟ್ಸಾಪ್ ಆಂಡ್ರಾಯ್ಡ್ ಹಾಗೂ ಐಓಎಸ್‌ಗಳಿಗೆ ತನ್ನ ಬೆಟಾ ಪ್ರೋಗ್ರಾಂಗಳನ್ನು ಅದಾಗಲೇ ಬಿಡುಗಡೆ ಮಾಡಿದೆ. ಇದೀಗ ಫೇಸ್ಬುಕ್ ಒಡೆತನದ ವಾಟ್ಸಾಪ್ ವೆಬ್ ಅವತಾರದಲ್ಲೂ ಬೆಟಾ ಪ್ರೋಗ್ರಾಂ ಬಿಡುಗಡೆ ಮಾಡಲು ಸಜ್ಜಾಗಿದೆ.
ಈ ಮೂಲಕ ಅಪ್ಲಿಕೇಶನ್‌ಗೆ ಬರುವ ಎಲ್ಲಾ ಹೊಸ ಫೀಚರ್‌ಗಳನ್ನೂ ವಾಟ್ಸಾಪ್ ಬಳಕೆದಾರರು ವೆಬ್ ವರ್ಶನ್‌ನಲ್ಲೂ ಚೆಕ್ ಮಾಡಿ ನೋಡಬಹುದಾಗಿದೆ. ಆಸಕ್ತ ಬಳಕೆದಾರರು ಬೆಟಾ ವರ್ಶನ್‌ಗಳನ್ನು https://web.whatsapp.com/desktop-beta/windows/release/x64/WhatsAppSetup-beta.exe ಮತ್ತು https://web.whatsapp.com/desktop-beta/mac/files/WhatsApp-beta.dmg ಲಿಂಕ್‌ಗಳಿಗೆ ಭೇಟಿ ಕೊಟ್ಟು ಡೌನ್ಲೊಡ್ ಮಾಡಿಕೊಳ್ಳಬಹುದಾಗಿದೆ.
ಕಾಬೂಲ್ ರಸ್ತೆಗಳಲ್ಲಿ ಓಡ್ತಿದ್ದ ನಿರ್ಮಾಪಕಿ ವಿಡಿಯೋ ವೈರಲ್
ವಾಟ್ಸಾಪ್‌ನ ಪಿಸಿ ವರ್ಶನ್ ಇನ್‌ಸ್ಟಾಲ್ ಮಾಡಿದ ಬಳಿಕ ನಿಮಗೆ ಎಲ್ಲಾ ಅಪ್ಡೇಟ್‌ಗಳು ತನ್ನಿಂತಾನೇ ಆಗಲಿದ್ದು, ಮ್ಯಾನುವಲ್ ಆಗಿ ಈ ಕೆಲಸ ಮಾಡಬೇಕಾದ ಅಗತ್ಯ ಇರುವುದಿಲ್ಲ.