ಗೂಗಲ್, ಪ್ರಪಂಚದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಅನೇಕ ವೈಶಿಷ್ಟ್ಯಗಳನ್ನು ನೀಡಿದೆ. ಅದ್ರಲ್ಲಿ ಸ್ಟೇಟಸ್ ಕೂಡ ಒಂದು. ವಾಟ್ಸಾಪ್ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸ್ಟೇಟಸ್ ಬಳಕೆ ಮಾಡ್ತಾರೆ.
ವಾಟ್ಸಾಪ್‌ನ ಸ್ಟೇಟಸ್ ನಲ್ಲಿ ಫೋಟೋ ಮತ್ತು ವಿಡಿಯೊ ಹಾಕಬಹುದು. ನಮ್ಮ ಫೋನ್ ನಲ್ಲಿ ಸೇವ್ ಆಗಿರುವ ಎಲ್ಲರಿಗೂ ವಾಟ್ಸಾಪ್ ಸ್ಟೇಟಸ್ ಕಾಣುತ್ತದೆ. ಇದನ್ನು 24 ಗಂಟೆ ಮಾತ್ರ ನೋಡಬಹುದು. ಬೇರೊಬ್ಬರ ವಾಟ್ಸಾಪ್ ಸ್ಟೇಟಸ್ ನಲ್ಲಿರುವ ಫೋಟೋವನ್ನು ನಾವು ಸ್ಕ್ರೀನ್ ಶಾಟ್ ಹೊಡೆದು ಬೇರೆಯವರಿಗೆ ಕಳುಹಿಸಬಹುದು. ಆದ್ರೆ ವಿಡಿಯೋ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ವಿಡಿಯೋ ಡೌನ್ಲೋಡ್ ಮಾಡಬೇಕು ಎನ್ನುವವರಿಗೆ ಇಲ್ಲೊಂದು ಟ್ರಿಕ್ ಇದೆ.
ವಾಟ್ಸಾಪ್ ಸ್ಟೇಟಸ್ ವಿಡಿಯೊವನ್ನು ಹಂಚಿಕೊಳ್ಳಲು, ಮೊದಲು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಫೈಲ್ಸ್ ಹೆಸರಿನ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು. ನಂತರ ಈ ಅಪ್ಲಿಕೇಶನ್ ಓಪನ್ ಮಾಡಬೇಕು. ಐಒಎಸ್ ಬಳಕೆದಾರರು ಯಾವುದೇ ಇತರ ಫೈಲ್ ಮ್ಯಾನೇಜರ್ ಅಪ್ಲಿಕೇಶನ್ ಸಹ ಬಳಸಬಹುದು. ಗೂಗಲ್ ಫೈಲ್‌ಗಳ ಅಪ್ಲಿಕೇಶನ್ ಮೇಲಿನ ಎಡಭಾಗದಲ್ಲಿ ಮೆನು ಕಾಣಿಸಿಕೊಳ್ಳುತ್ತದೆ. ಅದನ್ನು ತೆರೆಯಬೇಕು. ಸೆಟ್ಟಿಂಗ್‌ಗಳಿಗೆ ಹೋಗಿ ಅಡಗಿಸಲಾದ ಫೈಲ್‌ಗಳನ್ನು ತೋರಿಸು ಆಯ್ಕೆಯನ್ನು ಆನ್ ಮಾಡಿ.
ಇದರ ನಂತರ ಫೈಲ್ ಮ್ಯಾನೇಜರ್‌ಗೆ ಹೋಗಿ ಇಂಟರ್ನೆಟ್ ಸ್ಟೋರೇಜ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಮೀಡಿಯಾ ಆಯ್ಕೆ ಕ್ಲಿಕ್ ಮಾಡಿ. ನೀವು ಯಾವ ಸ್ಟೇಟಸ್ ನೋಡಿದ್ದೀರೋ ಆ ಪೋಲ್ಡರ್ ಕಾಣುತ್ತದೆ. ಅಲ್ಲಿ ವಿಡಿಯೊವನ್ನು ಫೋಲ್ಡರ್‌ನಿಂದ ಸೇವ್ ಮಾಡಬಹುದು. ಡೌನ್‌ಲೋಡ್ ಕೂಡ ಮಾಡಬಹುದು.