ಬಹುಬೇಗನೇ ಸಂಪರ್ಕ ಸಾಧಿಸುವ ವಾಟ್ಸಪ್ ಅಪ್ಲಿಕೇಷನ್ ಕಾಲಕಾಲಕ್ಕೆ ಅಪ್ ಡೇಟ್ ಆಗ್ತಿದ್ದು ಫೋನ್ ಬಳಕೆದಾರರ ಬೇಡಿಕೆಗಳನ್ನು ಪೂರೈಸಲು ಮೆಟಾ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಮತ್ತೊಂದು ಅಪ್ ಡೇಟ್ ವಾಟ್ಸಪ್ ನಲ್ಲಿದ್ದು ಗ್ರಾಹಕರ ಬಳಕೆಗೆ ಲಭ್ಯವಿದೆ. ವಾಟ್ಸಪ್ ನಲ್ಲಿ ಟೆಕ್ಸ್ಟ್ ಮೆಸೇಜ್ ಜೊತೆಗೆ ಫೋಟೋ, ವಿಡಿಯೋ , ಎಮೋಜಿ- ಸ್ಟಿಕ್ಕರ್ ಗಳನ್ನೂ ಹಂಚಿಕೊಳ್ಳಬಹುದು. ಆದರೆ ಸಂಪೂರ್ಣ ಸ್ಟಿಕರ್ ಪ್ಯಾಕ್ ಗಳನ್ನು ಹಂಚಿಕೊಳ್ಳಲು ಆಗ್ತಿರಲಿಲ್ಲ. ಆದರೆ ಇದೀಗ ವಾಟ್ಸಪ್ ನಲ್ಲಿ ಸ್ಟಿಕ್ಕರ್ ಪ್ಯಾಕ್‌ಗಳನ್ನೂ ಹಂಚಿಕೊಳ್ಳಬಹುದು.
ವಾಟ್ಸಪ್ ಬಳಕೆದಾರರಿಗೆ ಸ್ಟಿಕ್ಕರ್ ಪ್ಯಾಕ್‌ಗಳನ್ನು ಹಂಚಿಕೊಳ್ಳಲು ಇತ್ತೀಚೆಗೆ ಫೀಚರ್ ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ವಾಟ್ಸಪ್ ಬಳಕೆದಾರರು ತಮ್ಮ ಅಪ್ಲಿಕೇಶನ್‌ನಲ್ಲಿರುವ ಯಾವುದೇ ಸ್ಟಿಕ್ಕರ್ ಪ್ಯಾಕ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯ. ಪ್ರಸ್ತುತ ಸ್ಟಿಕ್ಕರ್ಸ್ ಗಳನ್ನಷ್ಟೇ ಹಂಚಿಕೊಳ್ಳಲು ಅವಕಾಶವಿತ್ತು, ಆದರೆ ಹೊಸ ನವೀಕರಣದ ನಂತರ ಸಂಪೂರ್ಣ ಸ್ಟಿಕ್ಕರ್ ಪ್ಯಾಕ್ ಅನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ವಾಟ್ಸಪ್ ನ ಈ ಹೊಸ ವೈಶಿಷ್ಟ್ಯವನ್ನು ಪ್ರಸ್ತುತ iOS ನ ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ. ನೀವು ಸ್ಟಿಕ್ಕರ್ ಪ್ಯಾಕ್ ಅನ್ನು ಯಾರೊಂದಿಗೆ ಹಂಚಿಕೊಳ್ಳುತ್ತೀರೋ ಅವರು ಆ ಸ್ಟಿಕ್ಕರ್ ಪ್ಯಾಕ್ ಅನ್ನು ಅವರ ಫೋನ್‌ನಲ್ಲಿ ಇಟ್ಟುಕೊಳ್ಳಬಹುದು.